Parkinson’s meaning in Kannada (3 ರೋಗಲಕ್ಷಣಗಳು, 3 ಪರಿಹಾರಗಳು )! ಕನ್ನಡದಲ್ಲಿ ಪಾರ್ಕಿನ್ಸನ್ ಅರ್ಥ
ನಿಮಗೆ ಪಾರ್ಕಿನ್ಸನ್ ಕಾಯಿಲೆ ಇದ್ದರೆ, Parkinson’s meaning in Kannada (ಕನ್ನಡದಲ್ಲಿ ಪಾರ್ಕಿನ್ಸನ್ ಅರ್ಥ) ನೀವು ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆಯ ಅರ್ಥವನ್ನು ತಿಳಿದುಕೊಳ್ಳಬೇಕು! ಪಾರ್ಕಿನ್ಸನ್ ಕಾಯಿಲೆಗೆ ಕಾರಣ, ರೋಗನಿರ್ಣಯ ಮತ್ತು ಉತ್ತಮ ಚಿಕಿತ್ಸೆಯನ್ನು ಸರಳ ಪದಗಳಲ್ಲಿ ತಿಳಿಯಿರಿ! ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪ್ರತಿಯೊಬ್ಬರೂ ಈ ಪಾರ್ಕಿನ್ಸನ್ ರೋಗಲಕ್ಷಣಗಳ ಬಗ್ಗೆ ತಿಳಿದಿರಬೇಕು. ಈ ರೋಗಲಕ್ಷಣಗಳು ಬಹಳಷ್ಟು ವಯಸ್ಸಾದ ವ್ಯಕ್ತಿಗಳಲ್ಲಿ ಕಂಡುಬರುತ್ತವೆ, ಆದರೆ ಅವರು ಅದನ್ನು ನಿರ್ಲಕ್ಷಿಸುತ್ತಾರೆ. ಇದು ಬೇಸರದ ಸಂಗತಿಯಾಗಿದೆ. Parkinson’s meaning in Kannada ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆ (ಪಾರ್ಕಿನ್ಸನ್ ಅರ್ಥ) ಎಂದರೆ ಏನು ಎಂದು ನೀವು ನಿಜವಾಗಿಯೂ ಅರ್ಥಮಾಡಿಕೊಂಡರೆ, ಇದಕ್ಕೆ ಯಾವ ಚಿಕಿತ್ಸೆಗಳು ಲಭ್ಯವಿದೆ ಎಂದು ನಿಮಗೆ ತಿಳಿಯುತ್ತದೆ. ಪಾರ್ಕಿನ್ಸನ್ ಎಂದರೆ ಏನು ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಾವು ಮೂರು ವಿಷಯಗಳ ಬಗ್ಗೆ ತಿಳಿದಿರಬೇಕು: 1. ಪಾರ್ಕಿನ್ಸನ್ ಕಾಯಿಲೆಯ 3 ಪ್ರಮುಖ ಲಕ್ಷಣಗಳು: ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳು 1. ಕೈಕಾಲುಗಳ ನಡುಕ 2. ನಿಧಾನಗತಿಯ ಕಾರ್ಯಗಳು , ಉದಾ : ನಿಧಾನಗತಿಯಲ್ಲಿ ನಡೆದಾಡುವುದು 3. ಸ್ನಾಯು ಮತ್ತು ಕೈ ಗಂಟುಗಳಲ್ಲಿ ಬಿಗಿತ 2. ಪಾರ್ಕಿನ್ಸನ್ ಕಾಯಿಲೆಗೆ ಎರಡು ರೀತಿಯಲ್ಲಿ ಚಿಕಿತ್ಸೆ ನೀಡಬಹುದು: ಪಾರ್ಕಿನ್ಸನ್ ಔಷಧಗಳು ಪಾರ್ಕಿನ್ಸನ್ ಚಿಕಿತ್ಸೆ (ಡೀಪ್-ಬ್ರೈನ್-ಸ್ಟಿಮ್ಯುಲೇಷನ್ -DBS ಮತ್ತು ಸ್ಟೀಮ್-ಸೆಲ್ ಥೆರಪಿ) 3. ಈ ಎರಡು ಅಂಶಗಳೊಂದಿಗೆ, ಪಾರ್ಕಿನ್ಸನ್ ಕಾಯಿಲೆಗೆ ಕಾರಣವೇನೆಂಬುದನ್ನು ನಾವು ತಿಳಿಯುತ್ತೇವೆ. Steps to understand Parkinson’s meaning in Kannada ನಾನು ಡಾಕ್ಟರ್ ಸಿದ್ಧಾರ್ಥ್ ಖಾರ್ಕರ್, ಥಾಣೆಯಲ್ಲಿ ನರವಿಜ್ಞಾನಿ (Neurologist in Thane). ನಾನು ಮುಂಬೈನಲ್ಲಿ ನ್ಯೂರಾಲಜಿಸ್ಟ್ ಆಗಿಯೂ ಕೆಲಸ ಮಾಡುತ್ತೇನೆ (Neurologist in Mumbai). ಬನ್ನಿ, ಕನ್ನಡದಲ್ಲಿ ಪಾರ್ಕಿನ್ಸನ್‌ನ ಅರ್ಥವನ್ನು ಅರ್ಥಮಾಡಿಕೊಳ್ಳೋಣ. Tremor of Parkinson’s in Kannada – (ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆಯ ನಡುಕ) ಪಾರ್ಕಿನ್ಸನ್ ಕಾಯಿಲೆಯ ನಡುಕ ಪಾರ್ಕಿನ್ಸನ್ ಕಾಯಿಲೆಯ ಮೂರು ಮುಖ್ಯ ಲಕ್ಷಣಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳು 1. ಕೈಕಾಲುಗಳ ನಡುಕ 2. ನಿಧಾನಗತಿಯ ಕಾರ್ಯಗಳು , ಉದಾ : ನಿಧಾನಗತಿಯಲ್ಲಿ ನಡೆದಾಡುವುದು 3. ಸ್ನಾಯು ಮತ್ತು ಕೈ ಗಂಟುಗಳಲ್ಲಿ ಬಿಗಿತ ಮೊದಲಿಗೆ, ಪಾರ್ಕಿನ್ಸನ್ ನಡುಕವನ್ನು ಚರ್ಚಿಸೋಣ. 1 . ಕಂಪನ (ಅದರುವಿಕೆ, Tremor) ಕೈಯಲ್ಲಿ ನಡುಕ ವಿವಿಧ ಕಾರಣಗಳಿಗಾಗಿ ಸಂಭವಿಸಬಹುದು. ಎಲ್ಲಾ ಅಂಶಗಳನ್ನು ವೀಕ್ಷಿಸಲು, ಇಲ್ಲಿ ಕ್ಲಿಕ್ ಮಾಡಿ. ಆದರೆ ಇಲ್ಲಿ ನಾವು ಪಾರ್ಕಿನ್ಸನ್ ನಡುಕ ಬಗ್ಗೆ ಮಾತ್ರ ಮಾತನಾಡುತ್ತೇವೆ. ನೀವು ಸುಮ್ಮನೆ ಕುಳಿತಿದ್ದರೂ ಪಾರ್ಕಿನ್ಸನ್ ನಡುಕ ಸಂಭವಿಸಬಹುದು. ಇದು ಇದರ ವಿಶಿಷ್ಟ ಲಕ್ಷಣವಾಗಿದೆ. ಇಂಗ್ಲಿಷ್‌ನಲ್ಲಿ, ಪಾರ್ಕಿನ್ಸನ್ ನಡುಕವನ್ನು”rest tremor” ವಿಶ್ರಾಂತಿಯ ನಡುಕ ಎಂದು ಕರೆಯಲಾಗುತ್ತದೆ. ಪಾರ್ಕಿನ್ಸನ್‌ನಿಂದ ಉಂಟಾಗುವ ಕೈ ನಡುಕದ ಉದಾಹರಣೆಯನ್ನು ನೋಡಲು , ಈ ಕೆಳಗಿನ ವೀಡಿಯೊ ಮೇಲೆ ಕ್ಲಿಕ್ ಮಾಡಿ: https://www.youtube.com/watch?v=e532YW-Zwf0 ಪಾರ್ಕಿನ್ಸನ್ ನಡುಕವು ಕೇವಲ ಕೈ ಮಾತ್ರವಲ್ಲದೆ, ಪಾದಗಳಲ್ಲಿ ಅಥವಾ ತಲೆಯಲ್ಲಿಯೂ ಸಹ ಉಂಟಾಗಬಹುದು. ವ್ಯಕ್ತಿಯ ಪಾರ್ಕಿನ್ಸನ್ ನಡುಕವನ್ನು ಸಂಬಂಧಿಕರು ಆಗಾಗ್ಗೆ ತಿಳಿದುಕೊಳ್ಳುತ್ತಾರೆ. ರೋಗಿಯು ಟಿವಿ ನೋಡುತ್ತಾ ಆರಾಮವಾಗಿ ಕುಳಿತಿದ್ದಾನೆ ಎಂದು ಕಲ್ಪಿಸಿಕೊಳ್ಳಿ. ಆಗ ಅವನ ಮಗ ತಂದೆಯ ಕೈಯಲ್ಲಿ ಉಂಟಾಗುತ್ತಿರುವ ಕಂಪನವನ್ನು ನೋಡಿ ಹೀಗೆ ಕೇಳುತ್ತಾನೆ !: ” ಅಪ್ಪಾ !! ನಿಮ್ಮ ಕೈ ಏಕೆ ನಡುಗುತ್ತಿದೆ? “ ಈ ರೀತಿಯ ಉದಾಹರಣೆಗಳನ್ನು ನನ್ನ ಚಿಕಿತ್ಸಾಲಯಕ್ಕೆ ಬಂದ ರೋಗಿಗಳು ಆಗಾಗ್ಗೆ ಹೇಳುತ್ತಾರೆ. ಇದನ್ನೇ “ವಿಶ್ರಾಂತಿ ನಡುಕ” ಎನ್ನುತ್ತಾರೆ ಮತ್ತು ಈ ನಡುಕವೇ ಪಾರ್ಕಿನ್ಸನ್ ನಡುಕ. ಕೆಳಗಿನ ವೀಡಿಯೊದಲ್ಲಿ ಪಾರ್ಕಿನ್ಸನ್ ನಡುಕದ ಮತ್ತೊಂದು ಉದಾಹರಣೆಯನ್ನು ನೀವು ಕಾಣಬಹುದು. ವಿಡಿಯೋದಲ್ಲಿನ ಈ ವ್ಯಕ್ತಿಯು ಹೆಚ್ಚು ನಡುಗುತ್ತಿದ್ದಾನೆ. https://www.youtube.com/watch?v=wZZ4Vf3HinA Parkinson’s meaning in Kannada (ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆಯ ಅರ್ಥ) ದಲ್ಲಿ ತಿಳಿದುಕೊಳ್ಳುವ ಮೊದಲ ಹೆಜ್ಜೆ ಏನೆಂದರೆ ಪಾರ್ಕಿನ್ಸನ್ ನ ನಡುಕವನ್ನು ಹೇಗೆ ಗುರುತಿಸುವುದು ? Symptoms of Parkinson’s in Kannada ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳು – ಪಾರ್ಕಿನ್ಸನ್ ರೋಗ ಲಕ್ಷಣಗಳು ನಡುಕದ ಜೊತೆಗೆ ಹೆಚ್ಚುವರಿ ಪಾರ್ಕಿನ್ಸನ್ ನ ಇತರ ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಬಹಳ ಅವಶ್ಯಕ, ಅವು ಯಾವುದೆಂದರೆ: 2. ನಿಧಾನತೆ (ಬ್ರಾಡಿ-ಕಿನೇಶಿಯಾ, Bradykinesia): ರೋಗಿಯ ಚಲನೆಯು ಹೆಚ್ಚು ಜಡವಾಗುತ್ತದೆ. ಸಂಬಂಧಿಕರು ಕೆಲವೊಮ್ಮೆ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಕೆಲವೊಮ್ಮೆ ಕುಟುಂಬದ ಸದಸ್ಯರು ನನ್ನ ಬಳಿಗೆ ಬಂದು, ಹೀಗೆ ಹೇಳುತ್ತಾರೆ: ” ನನ್ನ ಅಮ್ಮ ಈಗ ತುಂಬಾ ಸೋಮಾರಿಯಾಗಿದ್ದಾಳೆ! ಒಂದೇ ಜಾಗದಲ್ಲಿ ಇಡೀ ದಿನ ಕುಳಿತುಕೊಂಡು ಇರ್ತಾರೆ!! “ ಇದು ಖಂಡಿತವಾಗಿಯೂ ಸೋಮಾರಿತನವಲ್ಲ. ಇದು ಪಾರ್ಕಿನ್ಸನ್ ಕಾಯಿಲೆಯ ರೋಗ ಲಕ್ಷಣವಾಗಿದೆ. ಈ ರೋಗಲಕ್ಷಣವನ್ನು ಇಂಗ್ಲಿಷ್‌ನಲ್ಲಿ “ಬ್ರಾಡಿ-ಕಿನೇಶಿಯಾ” ಅಥವಾ ನಿಧಾನತೆ ಎಂದು ಕರೆಯಲಾಗುತ್ತದೆ. ನಡೆಯುವಾಗ, ಬಲ ಅಥವಾ ಎಡಕ್ಕೆ ತಿರುಗಿದಾಗ ಇವರು ಸ್ತಬ್ಧರಾಗುತ್ತಾರೆ. ತರುವಾಯ ಮುನ್ನಡೆಯಲು ಸಾಧ್ಯವಾಗುವುದಿಲ್ಲ. ಈ ರೀತಿಯ ನಡಿಗೆ ಎಷ್ಟು ಕಷ್ಟಕರವಾಗಿದೆ ಎಂಬುದನ್ನು ನೋಡಲು ಈ ವೀಡಿಯೊವನ್ನು ನೋಡಿ: https://www.youtube.com/watch?v=pFLC9C-xH8E3. ಬಿಗಿತ (ಗಟ್ಟಿತನ, Rigidity) ರೋಗಿಯ ಕೈಗಳು ಮತ್ತು ಪಾದಗಳು ಗಟ್ಟಿಯಾಗಲು ಪ್ರಾರಂಭಿಸುತ್ತವೆ. ಕೆಲವೊಮ್ಮೆ ಅವು ಎಷ್ಟು ಗಟ್ಟಿಯಾಗುತ್ತವೆ ಎಂದರೆ ಅವುಗಳನ್ನು ಚಲಿಸುವುದು ಸವಾಲಿನ ಸಂಗತಿಯಾಗಿದೆ. ಆಗಾಗ್ಗೆ, ರೋಗಿಯು ಬಿಗಿತದ ಬಗ್ಗೆ ತನ್ನದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾನೆ. ಆಗಾಗ್ಗೆ, ರೋಗಿಗಳು ಹೇಳುತ್ತಾರೆ: ” ವೈದ್ಯರೇ, ಈ ಕೈ ಮತ್ತು ಕಾಲು ಎರಡೂ ತುಂಬಾ ಭಾರವಾಗಿರುವಂತೆ ಅನಿಸುತ್ತಿದೆ. ನಡೆಯುವಾಗ ಪಾದಗಳನ್ನು ಎತ್ತಲೂ ಸಹ ಆಗುವುದಿಲ್ಲ. “ ಪಾರ್ಕಿನ್ಸನ್ ಕಾಯಿಲೆಯ ರೋಗಲಕ್ಷಣಗಳನ್ನು ಚರ್ಚಿಸುವಾಗ ಈ ಮೂರು ರೋಗಲಕ್ಷಣಗಳು ಅತ್ಯಂತ ಮಹತ್ವದ್ದಾಗಿದೆ. ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ ಇಲ್ಲಿ ಕಾಣಬಹುದು. [ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳು] Cause of Parkinson’s in Kannada – (ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆಗೆ ಕಾರಣ) ಪಾರ್ಕಿನ್ಸನ್ ಕಾಯಿಲೆಯ ಕಾರಣ Parkinson’s meaning in Kannada ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆಗೆ ಕಾರಣ ಅಥವಾ ಪಾರ್ಕಿನ್ಸನ್ ಕಾಯಿಲೆಯ ಅರ್ಥವನ್ನು ತಿಳಿದುಕೊಳ್ಳಲು, ಪಾರ್ಕಿನ್ಸನ್ ಕಾಯಿಲೆಯ ಹೇಗೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಹಾಗಾದರೆ, ಈ ಪಾರ್ಕಿನ್ಸನ್ ಕಾಯಿಲೆ ಏಕೆ ಬರುತ್ತದೆ? ಪಾರ್ಕಿನ್ಸನ್ ಕಾಯಿಲೆಗೆ ಕಾರಣವೇನು? ಎನ್ನುವುದನ್ನು ತಿಳಿದುಕೊಳ್ಳೋಣ.ನಮ್ಮ ಮೆದುಳಿನ ಮೂಲಕ ದೇಹದ ಹಲವಾರು ಭಾಗಗಳು ವಿದ್ಯುತ್ ಮತ್ತು ರಾಸಾಯನಿಕಗಳ ಮೂಲಕ ಪರಸ್ಪರ ಸಂವಹನ ನಡೆಸುತ್ತವೆ. ನಮ್ಮ ಮೆದುಳು ಹಿಂಭಾಗದಲ್ಲಿ ವಿಶಿಷ್ಟವಾದ ಪ್ರದೇಶವನ್ನು ಹೊಂದಿದೆ. ಇದನ್ನು (midbrain) ಮಧ್ಯ ಮೆದುಳು ಎಂದು ಕರೆಯಲಾಗುತ್ತದೆ. ಮಧ್ಯ ಮೆದುಳು ಒಂದು ವಿಶಿಷ್ಟವಾದ ರಾಸಾಯನಿಕವನ್ನು ಉತ್ಪಾದಿಸುತ್ತದೆ. ಡೋಪಮೈನ್ ಎಂಬುದು ಈ ವಿಶಿಷ್ಟ ರಾಸಾಯನಿಕದ ಹೆಸರಾಗಿದೆ. ಸಾಮಾನ್ಯವಾಗಿ ಹೇಳುವುದಾದರೆ, ಮಧ್ಯ ಮೆದುಳಿನಲ್ಲಿ ಉತ್ಪತ್ತಿಯಾಗುವ ಡೋಪಮೈನ್ ಮೆದುಳಿನ ಮುಂಭಾಗದ ಹಾಲೆಗಳಿಗೆ ಚಲಿಸುತ್ತದೆ. ಅಲ್ಲಿ, ಡೋಪಮೈನ್ ಮೆದುಳಿನ ಮುಂಭಾಗದ ಹಾಲೆಗಳನ್ನು ಉತ್ತೇಜಿಸುತ್ತದೆ. ಕೆಂಪು ಬಣ್ಣದಲ್ಲಿರುವ ಮೆದುಳಿನ ಭಾಗವನ್ನು ಮಧ್ಯ-ಮೆದುಳು ಎಂದು ಕರೆಯಲಾಗುತ್ತದೆ. ಇದು ಡೋಪಮೈನ್ ಅನ್ನು ತಯಾರಿಸುತ್ತದೆ ಮತ್ತು ಅದನ್ನು ಮೆದುಳಿನ ಮುಂಭಾಗದ ಭಾಗಗಳಿಗೆ ಕಳುಹಿಸುತ್ತದೆ. ಹೀಗೆ, ಮನುಷ್ಯನ ಮೆದುಳಿನ ಮುಂಭಾಗದ ಹಾಲೆಗಳು ಅವನ ನಡಿಗೆಗೆ ಸಹಾಯ ಮಾಡುತ್ತವೆ. ಈ ಮುಂಭಾಗದ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸಿದಾಗ ಮನುಷ್ಯ ತ್ವರಿತವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾನೆ ಮತ್ತು ಅವನ ಕೈ ಕಾಲುಗಳು ನಡುಗುವುದಿಲ್ಲ. ಪಾರ್ಕಿನ್ಸನ್ ಕಾಯಿಲೆಯಿಂದ ಮಧ್ಯ ಮೆದುಳಿನ ಕಾರ್ಯಚಟುವಟಿಕೆಗೆ ಅಡ್ಡಿಯಾಗುತ್ತದೆ. ಆಗ ಕಡಿಮೆ ಡೋಪಮೈನ್ ಉತ್ಪತ್ತಿಯಾಗುತ್ತದೆ. ಇದು ಏಕೆ ಸಂಭವಿಸುತ್ತದೆ ಎಂಬುದರ ಬಗ್ಗೆ ಭೂಮಿಯ ಮೇಲಿನ ಯಾರಿಗೂ ಸ್ಪಷ್ಟವಾದ ತಿಳುವಳಿಕೆ ಇಲ್ಲ. ಆನುವಂಶಿಕ ಸಮಸ್ಯೆಗಳಿಂದಾಗಿ ಕೆಲವು ವ್ಯಕ್ತಿಗಳಲ್ಲಿ ಇದು ಸಂಭವಿಸಬಹುದು. ಆದಾಗ್ಯೂ, ಬಹುಪಾಲು ಜನರ ಮೇಲೆ ನಡೆದ ಸಂಶೋಧನೆಯ ಹೊರತಾಗಿಯೂ, ಇದು ಹೇಗೆ ಸಂಭವಿಸುತ್ತದೆ ಎಂದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಪಾರ್ಕಿನ್ಸನ್ ರೋಗಿಗಳಲ್ಲಿ, ಮಧ್ಯದ ಮೆದುಳಿನ ಸ್ನಾಯುಗಳು ಸಾಯುತ್ತವೆ ಮತ್ತು ಡೋಪಮೈನ್ ಪ್ರಮಾಣವು ಕಡಿಮೆಯಾಗುತ್ತದೆ. ಡೋಪಮೈನ್ ಪ್ರಮಾಣವು ಸಾಕಷ್ಟು ಇದ್ದಾಗ ಮಾತ್ರ ಮೆದುಳಿನ ಮುಂಭಾಗದ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಒಂದುವೇಳೆ ಇದರಲ್ಲಿ ಕೊರತೆ ಉಂಟಾದರೆ, ವ್ಯಕ್ತಿಯು ಹೆಚ್ಚು ನಿಧಾನವಾಗಿ ಚಲಿಸುತ್ತಾನೆ ಮತ್ತು ಅವನ ಕೈ ಅಲುಗಾಡಲು ಪ್ರಾರಂಭಿಸುತ್ತದೆ. ಅವನ ಇಡೀ ದೇಹವು ಬಿಗಿದಂತೆ ಭಾಸವಾಗುತ್ತದೆ. ಈ ಸ್ಥಿತಿಯನ್ನು ವೈದ್ಯರು ಪಾರ್ಕಿನ್ಸನ್ ರೋಗ ಎಂದು ಕರೆಯುತ್ತಾರೆ. Parkinson’s meaning in Kannada ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆಯ ಅರ್ಥ – ಕನ್ನಡದಲ್ಲಿ ಪಾರ್ಕಿನ್ಸನ್ ಅರ್ಥ ಇಲ್ಲಿಯವರೆಗೆ ಹೇಳಿರುವ ವಿಷಯದಿಂದ, Parkinson’s meaning in Kannada (ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆಯ ಅರ್ಥ) ಪಾರ್ಕಿನ್ಸನ್ ಕಾಯಿಲೆ ಎಂದರೆ ಏನು ಎಂಬುದರ ಬಗ್ಗೆ ನಿಮಗೆ ಸ್ಪಷ್ಟವಾದ ತಿಳುವಳಿಕೆ ಸಿಕ್ಕಿದೆ. ಆದಾಗ್ಯೂ, Parkinson’s meaning in Kannada ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆಯ ಅರ್ಥವನ್ನು ಇಷ್ಟು ಮಾತ್ರ ತಿಳಿದುಕೊಂಡರೆ ಸಾಕಾಗುವುದಿಲ್ಲ. Parkinson’s meaning in Kannada ದಲ್ಲಿ ನಮ್ಮ ಮೂರನೇ ಅಂಶವೇನೆಂದರೆ ಪಾರ್ಕಿನ್ಸನ್ ಚಿಕಿತ್ಸೆಯ ಬಗ್ಗೆ ತಿಳಿಯುವುದು. ಬನ್ನಿ, ಪಾರ್ಕಿನ್‌ಸನ್‌ನ ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳೋಣ. ಆದರೆ ಅದಕ್ಕೂ ಮೊದಲು, ಕೆಲವು ಔಷಧಿಗಳು ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳನ್ನು ಉಂಟುಮಾಡಬಹುದು ಎಂದು ನಿಮಗೆ ತಿಳಿದಿದೆಯೇ??? Medications causing Parkinson’s in Kannada ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆಗೆ ಕಾರಣವಾಗುವ ಔಷಧಿಗಳು – ಪಾರ್ಕಿನ್ಸನ್ ಕಾಯಿಲೆಯ ರೋಗಲಕ್ಷಣಗಳನ್ನು ಉಂಟುಮಾಡುವ ಔಷಧಗಳು ಕೆಲವು ಔಷಧಿಗಳು ಡೋಪಮೈನ್ ಅನ್ನು ಕೆಲಸ ಮಾಡದ ಹಾಗೆ ತಡೆಯುತ್ತದೆ. ಇವುಗಳನ್ನು ಡೋಪಮೈನ್ ಬ್ಲಾಕರ್ಸ್ ಎಂದು ಕರೆಯಲಾಗುತ್ತದೆ. ಡೋಪಮೈನ್-ಬ್ಲಾಕರ್‌ಗಳು (ತ್ರಿಕೋನ) ಡೋಪಮೈನ್ (ವೃತ್ತ) ಮೆದುಳಿಗೆ ಸೇರದಂತೆ ತಡೆಯುತ್ತದೆ. ಇದೇ ಕಾರಣದಿಂದ ಡೋಪಮೈನ್ ಕೆಲಸ ಮಾಡುವುದಿಲ್ಲ ಈ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಪಾರ್ಕಿನ್ಸನ್ ತರಹದ ಲಕ್ಷಣಗಳು ಉಂಟಾಗಬಹುದು. ನೀವು ಈಗಾಗಲೇ ರೋಗವನ್ನು ಹೊಂದಿದ್ದರೆ ಪಾರ್ಕಿನ್ಸನ್ ರೋಗಲಕ್ಷಣಗಳು ತ್ವರಿತವಾಗಿ ಉಲ್ಬಣಗೊಳ್ಳಬಹುದು. ಈ ಔಷಧಿಗಳ ಬಳಕೆಯಿಂದ ರೋಗಿಯು ಪಾರ್ಕಿನ್ಸನ್ ಬಂದಿದ್ದರೆ, ಅದನ್ನು “ಡ್ರಗ್-ಇಂಡ್ಯೂಸ್ಡ್ ಪಾರ್ಕಿನ್ಸನ್ ” ಅಥವಾ “ಔಷಧಿ ಪ್ರೇರಿತ ಪಾರ್ಕಿನ್ಸನ್” ಎಂದು ಕರೆಯಲಾಗುತ್ತದೆ. ಪಾರ್ಕಿನ್ಸನ್ ಕಾಯಿಲೆಯನ್ನು ಉಲ್ಬಣಗೊಳಿಸಬಹುದಾದ ಔಷಧಿಗಳ ಪಟ್ಟಿ ಇಲ್ಲಿದೆ: ಔಷಧಿಗಳ ಕೆಲಸ ಔಷಧಿಗಳ ಹೆಸರುಗಳು 1. ಸ್ಕಿಜೋಫ್ರೇನಿಯಾದಂತಹ ಮನೋವೈದ್ಯಕೀಯ ಸಮಸ್ಯೆಗಳಿಗೆ ಬಳಸಲಾಗುವ ಅನೇಕ ಔಷಧಗಳು ಹಾಲೊಪೆರಿಡಾಲ್, ರಿಸ್ಪೆರಿಡಾಲ್, ಒಲಾಂಜಪೈನ್, ಅರಿಪಿಪ್ರಜೋಲ್, ಟ್ರೈಫ್ಲುಪೆರಾಜಿನ್ ಮತ್ತು ಇನ್ನೂ ಅನೇಕ ಔಷಧಿಗಳು ಲಭ್ಯವಿದೆ. ಸಾಮಾನ್ಯವಾಗಿ ಕ್ಲೋಜಪೈನ್ ಮತ್ತು ಕ್ವೆಟ್ಯಾಪೈನ್ ಔಷಧಿಗಳಿಂದ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. 2. ಮನಸ್ಥಿತಿ ಮತ್ತು ಖಿನ್ನತೆಗೆ ಬಳಸುವ ಕೆಲವು ಔಷಧಿಗಳು ಫ್ಲುಫೆನಾಜಿನ್, ಟ್ರ್ಯಾಂಕ್ವಿಲೈಜರ್, ಲಿಥಿಯಂ 3. ಕೆಲವು ವಾಂತಿ-ನಿರೋಧಕ ಔಷಧಗಳು ಮೆಟೊಕ್ಲೋಪ್ರಮೈಡ್, ಲೆವೊಸಲ್ಪುರೈಡ್, ಹೆಚ್ಚಿನ ಪ್ರಮಾಣದಲ್ಲಿ ಡೊಂಪೆರಿಡೋನ್ 30-40 ಮಿಗ್ರಾಂ / ದಿನ, ಫ್ಲುನರ್ಜಿನ್, ಕೆಲವೊಮ್ಮೆ ಸಿನ್ನಾರಿಜಿನ್ 4. ಕೆಲವು ಹೃದಯ ಮತ್ತು ರಕ್ತದೊತ್ತಡದ ಔಷಧಿಗಳು ಅಮಿಯೊಡಾರೊನ್, ಮೀಥೈಲ್-ಡೋಪಾ ಈ ಔಷಧಿಗಳನ್ನು ಪಡೆಯುವ ಪ್ರತಿಯೊಬ್ಬರಲ್ಲೂ ಈ ಕಾಯಿಲೆಯು ಉಲ್ಬಣಗೊಳ್ಳುತ್ತದೆ ಎಂದಲ್ಲ , ಅವು ಸಂಭವಿಸಬಹುದು ಇಲ್ಲವೇ ಸಂಭವಿಸದೇ ಇರಬಹುದು. ಅನೇಕ ಜನರು ಅಂತಹ ಕಾಯಿಲೆಗಳನ್ನು ಹೊಂದಿದ್ದಾರೆ, ಆದರೂ ಸಹ ಈ ಔಷಧಿಗಳನ್ನು ನೀಡುವುದು ಅನಿವಾರ್ಯವಾಗಿದೆ. ಆದಾಗ್ಯೂ, ನೀವು ಈಗಾಗಲೇ ಪಾರ್ಕಿನ್ಸನ್ ಕಾಯಿಲೆ ಹೊಂದಿದ್ದರೆ, ಈ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಪ್ರಯತ್ನಿಸಿ. Treatment of Parkinson’s in Kannada ಕನ್ನಡದಲ್ಲಿ ಪಾರ್ಕಿನ್ಸನ್ ಕಾಯಿಲೆಯ ಚಿಕಿತ್ಸೆ