ಅಪಸ್ಮಾರದ ಅರ್ಥ (2 ಪ್ರಕಾರಗಳು, 100 ಹೆಸರುಗಳು!!!) Epilepsy meaning in Kannada

Epilepsy meaning in Kannada (ಕನ್ನಡದಲ್ಲಿ ಎಪಿಲೆಪ್ಸಿಯ ಅರ್ಥ, ಅಪಸ್ಮಾರದ ಅರ್ಥ ) ಮರುಕಳಿಸುವ ಸೆಳವನ್ನು ಉಂಟುಮಾಡುವ ರೋಗ ಸ್ಥಿತಿಯಾಗಿದೆ. ಅಪಸ್ಮಾರದ ಅರ್ಥ (Epilepsy meaning in Kannada) ಅನಿಯಂತ್ರಿತ ವಿದ್ಯುತ್ ನಿಂದ ಉಂಟಾಗುವ ಲಕ್ಷಣಗಳು ವಿಧಗಳು ಮತ್ತು ಚಿಕಿತ್ಸೆಗಳನ್ನು ತಿಳಿಯಿರಿ.

ಈ ಲೇಖನವನ್ನು ಓದುವ ಮೊದಲು ದಯವಿಟ್ಟು , Seizure meaning in Kannada (ಕನ್ನಡದಲ್ಲಿ ಸೀಜರ್ ಅರ್ಥ) ಲೇಖನವನ್ನು ಓದಲೇಬೇಕು. ಏಕೆಂದರೆ, ಸೆಳವಿನ ಅರ್ಥವನ್ನು ತಿಳಿದುಕೊಂಡ ನಂತರವಷ್ಟೇ, ನೀವು ಅಪಸ್ಮಾರ ಪದದ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಅಪಸ್ಮಾವು ಎರಡು ಮುಖ್ಯ ಪ್ರಕಾರಗಳನ್ನು ಹೊಂದಿವೆ:

ಅಪಸ್ಮಾರದ 2 ಪ್ರಕಾರಗಳು
1. ಫೋಕಲ್ ಸೆಳವು – ಮೆದುಳಿನ ಒಂದು ಸಣ್ಣ ಭಾಗದಲ್ಲಿ ಉಂಟಾಗುವ ಸೆಳವು ಆಗಿದೆ ಮತ್ತು ಇದು ಆ ನಿರ್ದಿಷ್ಟ ಭಾಗಕ್ಕೆ ಮಾತ್ರ ಸೀಮಿತವಾಗಿರುತ್ತದೆ.
2. ಜೆನೆರಲೈಜ್ಡ್ ಸೆಳವು – ಇದು ದೊಡ್ಡ ಸೆಳವು ಆಗಿದ್ದು ಇಡೀ ಮೆದುಳಿನಾದ್ಯಂತ ಅಸಹಜ ವಿದ್ಯುತ್ ಪ್ರಚೋದನೆಯ ಮೂಲಕ ಉಂಟಾಗುತ್ತದೆ.

ಅಪಸ್ಮಾರವನ್ನು ಗುರುತಿಸಲು ಎರಡು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ:

ಅಪಸ್ಮಾರದ 2 ಪರೀಕ್ಷೆಗಳು 
1 . MRI – ಮೆದುಳಿನ ಚಿತ್ರ (Magnetic resonance imaging – ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್)
2 . EEG – ಮೆದುಳಿನ ವಿದ್ಯುತ್ ಪರೀಕ್ಷೆ (Electroencephalography – ಎಲೆಕ್ಟ್ರೋಎನ್ಸೆಫಾಲೋಗ್ರಫಿ)

ಮತ್ತು ಅಪಸ್ಮಾರದ ಚಿಕಿತ್ಸೆಯನ್ನು ನಾವು ಎರಡು ಭಾಗಗಳಾಗಿ ವಿಂಗಡಿಸಬಹುದು:

ಅಪಸ್ಮಾರದ 2 ಚಿಕಿತ್ಸೆಗಳು
1. ಔಷಧಗಳು: ಅಪಸ್ಮಾರವನ್ನು ಗುಣಪಡಿಸಲು 20ಕ್ಕೂ ಅಧಿಕ ಔಷಧಗಳು ಲಭ್ಯವಿವೆ.
2. ಶಸ್ತ್ರಚಿಕಿತ್ಸೆ: ಪ್ರತಿಕ್ರಿಯಾತ್ಮಕ ಶಸ್ತ್ರಚಿಕಿತ್ಸೆ, VNS, DBS ನಂತಹ ಅನೇಕ ಶಸ್ತ್ರಚಿಕಿತ್ಸೆಗಳು ಲಭ್ಯವಿದೆ.

ನಾನು ಡಾ ಸಿದ್ಧಾರ್ಥ್ ಖಾರ್ಕರ್, ಥಾಣೆಯಲ್ಲಿರುವ ನರರೋಗ ತಜ್ಞ (Neurologist in Thane), ಭಾರತ, ಮಹಾರಾಷ್ಟ್ರ . ನಾನು ಮುಂಬೈ (Neurologist in Mumbai)ನಲ್ಲಿ ನರವಿಜ್ಞಾನಿಯಾಗಿಯೂ ಕೆಲಸ ಮಾಡುತ್ತೇನೆ. ಬನ್ನಿ, ಈ ಪ್ರಮುಖ ವಿಷಯದ ಬಗ್ಗೆ ಒಟ್ಟಿಗೆ ಕಲಿಯೋಣ. ನಾನು ಭಾರತದಲ್ಲಿ (Epilepsy specialist in India) ಅಪಸ್ಮಾರ ತಜ್ಞ ಮತ್ತು ನಾನು ಭಾರತದಲ್ಲಿ ಎಪಿಲೆಪ್ಸಿ ಶಸ್ತ್ರಚಿಕಿತ್ಸೆಯನ್ನು ಒದಗಿಸುತ್ತೇನೆ (Epilepsy surgery in India).

ಬನ್ನಿ ಇದರ ಬಗ್ಗೆ ಇನ್ನು ಹೆಚ್ಚು ತಿಳಿದುಕೊಳ್ಳೋಣ:

ಸೆಳವು ಮತ್ತು ಅಪಸ್ಮಾರ (ಮೂರ್ಛೆ ರೋಗ) ನಡುವಿನ ವ್ಯತ್ಯಾಸ:

ಉದಾಹರಣೆಗೆ, ಈ ವ್ಯಕ್ತಿಯನ್ನು ಗಮನಿಸಿ. ಅನಿಯಂತ್ರಿತ ವಿದ್ಯುತ್ ತರಂಗಗಳು ಮೆದುಳಿನಾದ್ಯಂತ ಹರಡಿದ ಪರಿಣಾಮವಾಗಿ ಅವನ ಇಡೀ ದೇಹವು ತೀವ್ರವಾಗಿ ನಡುಗುತ್ತಿದೆ.

ದೊಡ್ಡ ಸೆಳವು ಸಾಮಾನ್ಯವಾಗಿ 1 ರಿಂದ 2 ನಿಮಿಷಗಳವರೆಗೆ ಇರುತ್ತದೆ.

ಸೆಳವು ಉಂಟಾಗಿ ಅದು ಕೊನೆಗೊಳ್ಳುವ ಮೊದಲು ಒಂದು ಅಥವಾ ಎರಡು ನಿಮಿಷಗಳವರೆಗೆ ಇರುತ್ತದೆ. ಹತ್ತು ರಿಂದ ಇಪ್ಪತ್ತು ನಿಮಿಷಗಳಲ್ಲಿ, ರೋಗಿಯು ಚೇತರಿಸಿಕೊಳ್ಳುತ್ತಾನೆ.

ಆದರೆ ಇದು ಪದೇ ಪದೇ ಬರುತ್ತಿದ್ದರೆ ಇದರ ಅರ್ಥವೇನು?

ನಿಮ್ಮ ಮೆದುಳು ಸೆಳವಿನ ರೋಗಸ್ಥಿತಿಗೆ ಹೊಂದಿಕೊಂಡಿದೆ ಎಂಬುದರ ಸಂಕೇತವಾಗಿದೆ.

ಹೀಗೆ ಪದೇ ಪದೇ ಸೆಳವು ಬರುವ ರೋಗ ಲಕ್ಷಣವನ್ನು ಆಂಗ್ಲ ಭಾಷೆಯಲ್ಲಿ “ಎಪಿಲೆಪ್ಸಿ” (Epilepsy) ಎನ್ನುತ್ತೇವೆ. ಹಾಗೂ ಕನ್ನಡದಲ್ಲಿ ಇದನ್ನು “ಅಪಸ್ಮಾರ” ಎಂದು ಕರೆಯಲಾಗುತ್ತದೆ.

ಈಗ ನಮಗೆ ಇದರ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿದೆ.

  • ಅಪಸ್ಮಾರ ಎಂಬುದು ಈ ರೋಗಕ್ಕೆ ಇರುವ ಹೆಸರಾಗಿದೆ.
  • ಮರುಕಳಿಸುವ ರೋಗ ಸ್ಥಿತಿಯನ್ನು ಸೆಳವು ಎಂದು ಕರೆಯಲಾಗುತ್ತದೆ.

Epilepsy meaning in Kannada ಕನ್ನಡದಲ್ಲಿ ಎಪಿಲೆಪ್ಸಿ ಅರ್ಥ (ಅಪಸ್ಮಾರದ ಅರ್ಥ) ಮತ್ತು Seizure meaning in Kannada ಕನ್ನಡದಲ್ಲಿ ಸೀಜರ್ ಅರ್ಥ (ಸೆಳವು ರೋಗಸ್ಥಿತಿ) ಎಂಬ ಎರಡು ಪ್ರತ್ಯೇಕ ಲೇಖನಗಳು ಏಕೆ ಎಂದು ಈಗ ನಿಮಗೆ ತಿಳಿದಿದೆ.

ಒಬ್ಬ ವ್ಯಕ್ತಿಗೆ ಸೆಳವು ಇದೆಯೇ ಎಂದು ತಿಳಿದುಕೊಳ್ಳುವುದು ಹೇಗೆ?

ಅನೇಕ ಇತರ ಕಾಯಿಲೆಗಳು ಸಹ ಅಪಸ್ಮಾರದಂತೆ ತೋರುತ್ತವೆ. ಉದಾಹರಣೆಗೆ, ನಿಮಗೆ ಹೃದಯದ ತೊಂದರೆ ಇದ್ದರೆ ಮತ್ತು ನಿಮ್ಮ ಮೆದುಳು ಇದ್ದಕ್ಕಿದ್ದಂತೆ ರಕ್ತವನ್ನು ಪಡೆಯುವುದನ್ನು ನಿಲ್ಲಿಸಿದರೆ ನೀವು ಮೂರ್ಛೆ ಹೋಗಬಹುದು!  ನೀವು ಪ್ಯಾರಾಸೋಮ್ನಿಯಾ ( ನಿದ್ರೆಯ ಅಸ್ವಸ್ಥತೆ ) ಎಂದು ಕರೆಯಲ್ಪಡುವ ರೋಗದಿಂದ ಬಳಲುತ್ತಿದ್ದರೆ, ಕನಸು ಕಂಡ ನಂತರ ಮಧ್ಯರಾತ್ರಿಯಲ್ಲಿ ಕಿರುಚಬಹುದು!

ಆದರೆ ನೆನಪಿನಲ್ಲಿಡಿ: ಸೆಳವಿನ ರೋಗ ಸ್ಥಿತಿಯು ಮೆದುಳಿನಲ್ಲಿನ ಅನಿಯಂತ್ರಿತ ವಿದ್ಯುತ್ ತರಂಗಗಳಿಂದ ಸಂಭವಿಸುತ್ತದೆ. ಈ ಮೇಲಿನ ರೋಗ ಸ್ಥಿತಿಯ ಕಾರಣಗಳಲ್ಲಿ, ಇಂತಹ ಯಾವುದೇ ಅನಿಯಂತ್ರಿತ ವಿದ್ಯುತ್ ತರಂಗಗಳು ಉಂಟಾಗುವುದಿಲ್ಲ.

S8WWHagsUa

ಆದಾಗ್ಯೂ, ರೋಗಿಯು ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಿದ ಮೊದಲ ಸಂಧರ್ಭದಲ್ಲಿ ವೈದ್ಯರು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. ಒಂದುವೇಳೆ ರೋಗಿಗೆ ಸೆಳವಿನ ರೋಗ ಸ್ಥಿತಿ ಇದ್ದರೆ ಈ ಕೆಳಗಿನ ಲಕ್ಷಣಗಳನ್ನು ಹೊಂದಿರುತ್ತಾನೆ .

  • ಮುನ್ಸೂಚನೆಯನ್ನು ಹೊಂದಿರುತ್ತಾರೆ (ಉದಾಹರಣೆಗೆ ಕೆಟ್ಟ ವಾಸನೆ ಬರುವುದು , ಅಥವಾ ಬಹಳಷ್ಟು ಭಯ ಪಡುವುದು, ದೃಷ್ಟಿ ಮುಂದಾಗುವಂತೆ ಭಾಸವಾಗುವುದು, ಜೋರಾದ ಶಬ್ದಕೇಳಿದಂತೆ ಭಾಸವಾಗುವುದು ಇತ್ಯಾದಿ)
  • 1-2 ನಿಮಿಷಗಳ ಕಾಲ ರೋಗಿಯು ಯಾವುದಕ್ಕೂ ಉತ್ತರ ನೀಡುವುದಿಲ್ಲ 
  • ವ್ಯಕ್ತಿಯ ದೇಹವು 1 ರಿಂದ 2 ನಿಮಿಷಗಳ ಕಾಲ ತೀವ್ರವಾಗಿ ಅಲುಗಾಡುತ್ತದೆ ಮತ್ತು ಕಣ್ಣುಗಳು ತೆರೆದಿರುತ್ತವೆ.
  • ಈ ರೋಗ ಸ್ಥಿತಿ ಮುಗಿದ ನಂತರ, ರೋಗಿಗೆ ಚೇತರಿಸಿಕೊಳ್ಳಲು 15 ರಿಂದ 45 ನಿಮಿಷಗಳು ಬೇಕಾಗುತ್ತದೆ.

ಆದ್ದರಿಂದ ಈ ರೀತಿಯ ರೋಗಲಕ್ಷಣಗಳು ಸೆಳವಿನ ರೋಗ ಸ್ಥಿತಿಯನ್ನು ಸೂಚಿಸುತ್ತದೆ, ಮತ್ತು ಈ ರೀತಿಯ ರೋಗಲಕ್ಷಣಗಳನ್ನು ವ್ಯಕ್ತಿಯು ಹೊಂದಿದ್ದರೆ, ಅದು ಇದೇ ಕಾಯಿಲೆ ಎಂದು ಹೇಳಬಹುದು.

ಆದರೆ ಕೆಲವೊಮ್ಮೆ, ವೈದ್ಯರಿಗೂ ಸಹ ರೋಗಿಗೆ ಇರುವ ಕಾಯಿಲೆಯು ಸೆಳವೇ ಅಥವಾ ಬೇರೆ ರೋಗವೇ ಎಂದು ಹೇಳಲು ಕಷ್ಟಕರವಾಗುತ್ತದೆ. ಅಂತಹ ಸಂದರ್ಭದಲ್ಲಿ , ದೀರ್ಘಾವಧಿಯ ವೀಡಿಯೊ-EEG ಅನ್ನು ಮಾಡುವ ಅಗತ್ಯವಿರುತ್ತದೆ.

ಒಬ್ಬ ವ್ಯಕ್ತಿಯು ಅಪಸ್ಮಾರವನ್ನು ( ಮೂರ್ಛೆ ರೋಗ) ಹೊಂದಿದ್ದಾನೆಯೇ ಎಂದು ತಿಳಿಯುವುದು ಹೇಗೆ?

Epilepsy meaning in Kannada (ಕನ್ನಡದಲ್ಲಿ ಅಪಸ್ಮಾರದ ಅರ್ಥ) ಅಪಸ್ಮಾರದ ಅರ್ಥವನ್ನು ನಾನು ನಿಮಗೆ ತುಂಬಾ ಸರಳವಾದ ವಾಕ್ಯಗಳಲ್ಲಿ ವಿವರಿಸುತ್ತೇನೆ.

ಈಗ , ನೀವು ವೈದ್ಯರು ಮತ್ತು ನಾನು ರೋಗಿ ಎಂದು ಊಹಿಸಿಕೊಳ್ಳಿ.

ನಾನು ನಿರಂತರವಾಗಿ ಸೆಳವಿನ ರೋಗಸ್ಥಿತಿಯನ್ನು ಅನುಭವಿಸುತ್ತಿದ್ದೇನೆ. ಹಾಗಾಗಿ ನೀವು , ನನ್ನ ಮೆದುಳು ಪದೇ ಪದೇ ಸೆಳೆತಕ್ಕೆ ಒಳಗಾಗುವ ಪ್ರವೃತ್ತಿಯನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳುತ್ತೀರಿ. ಹಾಗೂ ಈ ನನ್ನ ಈ ರೋಗದ ಸ್ಥಿತಿಯನ್ನು “ಅಪಸ್ಮಾರ” ( ಮೂರ್ಛೆ ರೋಗ ) ಎಂದು ಕರೆಯುತ್ತೀರಿ. ಮತ್ತು ಪುನಃ ಸೆಳವು ಉಂಟಾಗುವುದನ್ನು ತಡೆಯಲು ನನಗೆ ಔಷಧಿಗಳನ್ನು ನೀಡುತ್ತೀರಿ.

ಕನ್ನಡದಲ್ಲಿ ಎಪಿಲೆಪ್ಸಿ ಅರ್ಥವನ್ನು ಅರ್ಥಮಾಡಿಕೊಳ್ಳಲು (Epilepsy meaning in Kannada), ನಾವು ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು
ಕನ್ನಡದಲ್ಲಿ ಎಪಿಲೆಪ್ಸಿ ಅರ್ಥವನ್ನು ಅರ್ಥಮಾಡಿಕೊಳ್ಳಲು (Epilepsy meaning in Kannada), ನಾವು ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಆದರೆ ಅರ್ಥಮಾಡಿಕೊಳ್ಳಿ, ನನಗೆ ಸೆಳವು ಒಂದು ಬಾರಿ ಮಾತ್ರ ಬಂದರೆ, (ಮೊದಲ ಬಾರಿಗೆ) ಇದರ ಅರ್ಥವೇನು?

ಸರಿ, ಈಗ ನಾನು ಇದರಬಗ್ಗೆ ನಿಮಗೆ ಹೇಳುತ್ತೇನೆ:

ಈಗ ನಾನು ಮತ್ತೆ ಸೆಳವು ಬರುವುದನ್ನು ಕಾಯುತ್ತಿರಬೇಕೆ? ನೀವು ಇದರ ಪರೀಕ್ಷೆ ಮಾಡಿಸಬೇಕು, ಅದರ ಮೂಲಕ ನಿಮ್ಮ ಮೆದುಳು ಮತ್ತೆ ಸೆಳವು ಹೊಂದುವ ಪ್ರವೃತ್ತಿಯನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂದು ಕಂಡುಹಿಡಿಯಬೇಕು.

ಮತ್ತು ನನ್ನ ಮಾತು ಸರಿಯಾಗಿದೆ. ಅಂತಹ ಪರೀಕ್ಷೆಗಳು ನಮ್ಮಲ್ಲಿ ಲಭ್ಯವಿದೆ. ಇವುಗಳಲ್ಲಿ ಎರಡು ಮುಖ್ಯವಾದವುಗಳಿವೆ, ಅವು M-R-I ಮತ್ತು E-E-G 

EEG for Epilepsy in hindi

 

ಸೆಳವಿನ ರೋಗಸ್ಥಿತಿಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಈ ಪರೀಕ್ಷೆಗಳನ್ನು ಮಾಡಲಾಗುತ್ತದೆ.

  • ನೀವು ಅಪಸ್ಮಾರವನ್ನು (ಮೂರ್ಛೆ ರೋಗ) ಹೊಂದಿದ್ದರೆ, ಈ ವೈದ್ಯಕೀಯ ಪರೀಕ್ಷೆಗಳಿಂದ ಇದರ ಕಾರಣವನ್ನು ಕಂಡುಹಿಡಿಯಬಹುದು.
  • ನಿಮಗೆ ಒಮ್ಮೆ ಮಾತ್ರ ಸೆಳವು ಬಂದಿದ್ದರೆ, ಈ ವೈದ್ಯಕೀಯ ಪರೀಕ್ಷೆಗಳಿಂದ ನಿಮಗೆ ಮತ್ತೆ ಸೆಳವು (ಅಪಸ್ಮಾರ) ಬರುವ ಸಾಧ್ಯತೆ ಇದೆಯೇ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಆದರೆ ಅವುಗಳ ಬಗ್ಗೆ ತಿಳಿದುಕೊಳ್ಳುವ ಮೊದಲು, ( Epilepsy meaning in Kannada ಕನ್ನಡದಲ್ಲಿ ಅಪಸ್ಮಾರದ ಅರ್ಥ ) (ಅಪಸ್ಮಾರದ ಅರ್ಥ) ಅಪಸ್ಮಾರದ ವಿಧಗಳನ್ನು ತಿಳಿದುಕೊಳ್ಳೋಣ.

ಅಪಸ್ಮಾರದ ವಿಧಗಳು (Types of Epilepsy meaning in Kannada) (ಕನ್ನಡದಲ್ಲಿ ಅಪಸ್ಮಾರದ ವಿಧಗಳ ಅರ್ಥ)

ಬನ್ನಿ types of Epilepsy meaning in Kannada (ಎಪಿಲೆಪ್ಸಿ ವಿಧಗಳು ಕನ್ನಡದಲ್ಲಿ ಅರ್ಥ) ಅಪಸ್ಮಾರದ ವಿಧಗಳನ್ನು ಕನ್ನಡದಲ್ಲಿ ತಿಳಿದುಕೊಳ್ಳೋಣ.

ಅಪಸ್ಮಾರದ ವಿಧಗಳನ್ನು ಅರ್ಥಮಾಡಿಕೊಳ್ಳುವ ಮೊದಲು, ನೀವು Seizure meaning in Kannada  ಕನ್ನಡದಲ್ಲಿ ಸೆಳವು ಅರ್ಥ (ಸೀಜರ್ ಅರ್ಥ) ಲೇಖನವನ್ನು ಓದಬೇಕು. 

ಸೆಳವು ಸಂಭವಿಸುವ ಪ್ರಕಾರ, ರೋಗಿಗೆ ವಿವಿಧ ರೀತಿಯ ಅಪಸ್ಮಾರದ ( ಮೂರ್ಛೆ ರೋಗ ) ಹೆಸರನ್ನು ನೀಡಲಾಗುತ್ತದೆ. ಉದಾಹರಣೆಗೆ:

ಸೆಳವಿನ ಹೆಸರು ಅಪಸ್ಮಾರದ ವಿಧ
ಆಬ್ಸೆಂಟ್ (ಪೆಟಿಟ್-ಮಾಲ್) ಸೀಜರ್ ಆಬ್ಸೆಂಟ್ ಎಪಿಲೆಪ್ಸಿ
ಮಯೋಕ್ಲೋನಿಕ್ ಸೀಜರ್ ಮಯೋಕ್ಲೋನಿಕ್ ಎಪಿಲೆಪ್ಸಿ

ಈ ರೋಗವು ಹದಿಹರೆಯದ ವಯಸ್ಸಿನ (10-18 ವರ್ಷಗಳು) ರೋಗಿಗಳಿಗೆ ಬಂದರೆ ಅದನ್ನು “ಜುವೆನೈಲ್ ಮಯೋಕ್ಲೋನಿಕ್ ಎಪಿಲೆಪ್ಸಿ” (JME) ಎಂದು ಕರೆಯಲಾಗುತ್ತದೆ.

ಗ್ಯಾಸ್ಟ್ರಿಕ್ ಸೀಜರ್ ಗ್ಯಾಸ್ಟ್ರಿಕ್ ಎಪಿಲೆಪ್ಸಿ

ಉದಾಹರಣೆಗೆ, ಈ ವ್ಯಕ್ತಿಯನ್ನು ನೋಡಿ. ಅವನು ತನ್ನದೇ ಆದ ಲೋಕದಲ್ಲಿ ಕಳೆದು ಹೋಗುತ್ತಾನೆ, ಅವನ ದೃಷ್ಟಿ (ದುಃಸ್ವಪ್ನ) ಸ್ತಬ್ದವಾಗುತ್ತದೆ . ಇದನ್ನು ಅಪ್ನಿಯಾ ಎಪಿಲೆಪ್ಸಿ ಎಂದು ಕರೆಯಲಾಗುತ್ತದೆ.

YouTube – ಡಾ. ರಾಜೀವ್ ಗುಪ್ತಾ ಅವರ ವೀಡಿಯೊ

 

ಕೆಲವೊಮ್ಮೆ ಅಪಸ್ಮಾರದ ( ಮೂರ್ಛೆ ರೋಗ ) ಹೆಸರು ಮೆದುಳಿನ ಯಾವ ಭಾಗದಿಂದ ಸೆಳವು ಸಂಭವಿಸಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಮೆದುಳು ನಾಲ್ಕು ಪ್ರಮುಖ ಭಾಗಗಳನ್ನು ಹೊಂದಿದೆ –

  • “ಮುಮ್ಮೆದುಳು” (ಪ್ರಾಂಟಲ್ ಲೋಬ್) ಕಣ್ಣುಗಳ ಮೇಲಿನ ಭಾಗ / ಹಾಲೆ 
  • “ಮಧ್ಯ ಮೆದುಳು” ( ಟೆಂಪರಲ್ ಲೋಬ್) ಕಿವಿಯ ಕೆಳಗಿನ ಭಾಗ / ಹಾಲೆ 
  • “ಹಿಮ್ಮೆದುಳು” (ಪ್ಯಾರಿಯಲ್ ಲೋಬ್” ಅಥವಾ”ಆಕ್ಸಿಪಿಟಲ್ ಲೋಬ್) ತಲೆಯ ಹಿಂಭಾಗದ ಭಾಗ / ಹಾಲೆ
ಸೆಳವಿನ ಹೆಸರುಅಪಸ್ಮಾರದ ವಿಧ
ದೇಜಾ ವು ಸೀಜರ್ 

ಜೈಮ್-ವೂ ಸೀಜರ್ 

ಇಂತಹ ಸೆಳವು ಸಾಮಾನ್ಯವಾಗಿ “ಟೆಂಪರಲ್ ಲೋಬ್” ನಿಂದ ಬರುತ್ತವೆ. ಅಂದರೆ “ಟೆಂಪೋರಲ್ ಲೋಬ್ ಅಪಸ್ಮಾರ” ಆಗಿದೆ.
ಹೈಪರ್-ಕೈನೆಟಿಕ್ ಸೀಜರ್ ಈ ರೀತಿಯ ಸೆಳವು ಸಾಮಾನ್ಯವಾಗಿ “ಪ್ರಾಂಟಲ್ ಲೋಬ್ ” ನಲ್ಲಿ ಕಂಡುಬರುತ್ತವೆ. ಕೆಲವೊಮ್ಮೆ ಇದು “ಟೆಂಪರಲ್ ಲೋಬ್ ಅಪಸ್ಮಾರ ” ಅಥವಾ “ಪ್ಯಾರಿಯಲ್ ಲೋಬ್ ಅಪಸ್ಮಾರ ” ನಿಂದ ಕೂಡ ಬರಬಹುದು.
ಗ್ಯಾಸ್ಟ್ರಿಕ್ ಸೀಜರ್ ಇಂತಹ ಸೆಳವು ಸಾಮಾನ್ಯವಾಗಿ “ಟೆಂಪೋರಲ್ ಲೋಬ್ ಅಪಸ್ಮಾರ ” ನಲ್ಲಿ ಸಂಭವಿಸುತ್ತವೆ.

beautiful 2315 1920

ಮತ್ತು ಅಂತಿಮವಾಗಿ ಹೇಳುವುದಾದರೆ, ಕೆಲವು ಜನರು ಇನ್ನು ವಿವಿಧ ರೀತಿಯ ಸೆಳವನ್ನು ಹೊಂದಿರಬಹುದು. ಅಂದರೆ, ಅಪಸ್ಮಾರದ ಹೆಸರುಗಳು ಬೇರೆ ಬೇರೆ ಅಂಶಗಳ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ: ಮೆದುಳಿನ ಆಲೋಚನಾ ಸಾಮರ್ಥ್ಯ, ಅನುವಂಶಿಕತೆ, ಇತ್ಯಾದಿ..

ಇದಕ್ಕೆ ಉದಾಹರಣೆ ನೀಡುವುದಾದರೆ:

ಅಪಸ್ಮಾರದ ವಿಧಅರ್ಥ
ಸ್ಟರ್ಜ್-ವೆಬರ್ ಸಿಂಡ್ರೋಮ್ಇದರಲ್ಲಿ, ಸೆಳವಿನ ರೋಗ ಲಕ್ಷಣಗಳ ಜೊತೆಗೆ, ಮಗುವಿನ ಮುಖದ ಮೇಲೆ ಕೆಂಪು ಚುಕ್ಕೆಗಳು ಕೂಡ ಉಂಟಾಗುತ್ತದೆ.
ಲೆನಾಕ್ಸ್-ಗ್ಯಾಸ್ಟಾಟ್ ಸಿಂಡ್ರೋಮ್ಮಗುವಿಗೆ ವಿವಿಧ ರೀತಿಯ ಸೆಳವು ಬರುತ್ತವೆ (ಟಾನಿಕ್, ಎ-ಟಾನಿಕ್, ಮಯೋಕ್ಲೋನಿಕ್, ಡ್ರಾಪ್-ಅಟ್ಯಾಕ್ ಇತ್ಯಾದಿ) ಮತ್ತು ಇವುಗಳನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ.
ಲ್ಯಾಂಡೌ-ಕ್ಲೆಫ್ನರ್ ಸಿಂಡ್ರೋಮ್ಸೆಳವಿನ ರೋಗ ಲಕ್ಷಣಗಳ ಜೊತೆಗೆ, ಮಗುವಿನ ಮಾತಿನ ಸಾಮರ್ಥ್ಯವೂ ಕ್ರಮೇಣ ಕ್ಷೀಣಿಸಲು ಪ್ರಾರಂಭಿಸುತ್ತದೆ. ಅಪಸ್ಮಾರಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವುದರಿಂದ, ಮಗು ಮೂಕನಾಗುವುದನ್ನು ತಪ್ಪಿಸಬಹುದು!

Landau Kleffner speech

ಹೀಗೆ ಅಪಸ್ಮಾರಕ್ಕೆ ಅನೇಕ ಹೆಸರುಗಳಿವೆ, ಮತ್ತು ಪ್ರತಿ ಐದು ವರ್ಷಗಳಿಗೊಮ್ಮೆ, ಹಲವಾರು ಹೊಸ ಹೆಸರುಗಳು ಹುಟ್ಟಿಕೊಳ್ಳುತ್ತವೆ. ಈ ಹೆಸರುಗಳನ್ನು ಕೂಲಂಕಷವಾಗಿ ತಿಳಿದುಕೊಳ್ಳಲು, ಈ ಲಿಂಕ್ ಅನ್ನು ತೆರೆಯಿರಿ: [ಪ್ರತ್ಯೇಕ ವೆಬ್‌ಸೈಟ್‌ನಲ್ಲಿ ವಿವರವಾದ ಲೇಖನ, ಇಂಗ್ಲಿಷ್‌ ಭಾಷೆ]

ಸೆಳವು ರೋಗದ ಪರೀಕ್ಷೆ (Investigation of Epilepsy meaning in Kannada) (ಕನ್ನಡದಲ್ಲಿ ಎಪಿಲೆಪ್ಸಿ ಅರ್ಥದ ಪರೀಕ್ಷೆ )

(Epilepsy meaning in Kannada ಕನ್ನಡದಲ್ಲಿ ಎಪಿಲೆಪ್ಸಿ ಅರ್ಥ) (ಅಪಸ್ಮಾರದ ಅರ್ಥ) ಇದರ ನಿಜವಾದ ಅರ್ಥವೇನೆಂದು ತಿಳಿಯಲು ಇದರ ಪರೀಕ್ಷೆಗಳನ್ನು ತಿಳಿದುಕೊಳ್ಳಬೇಕು.

ಸೆಳವು  ಬಂದರೆ, ಅವರು ಕನಿಷ್ಠ ಎರಡು ಪರೀಕ್ಷೆಗಳನ್ನು ಮಾಡಿಸಬೇಕು:

1) M-R-I (MRI – Magnetic Resonance Imaging) (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್)

M-R-I ಇದೊಂದು ಯಂತ್ರವಾಗಿದ್ದು, ಸಂಪೂರ್ಣ ಮೆದುಳಿನ ಚಿತ್ರವನ್ನು ತೆಗೆಯಲು ಸಹಾಯಕವಾಗಿದೆ.

ಈ ಕೆಳಗಿನ ಚಿತ್ರ ನೋಡಿ . ಇದು M-R-I ಯಂತ್ರವಾಗಿದೆ:

MRI e1624178836736

M-R-I ಇದು ಮೆದುಳಿನ ಏಲ್ಲಾ ಸೂಕ್ಷ್ಮ ವಿವರಗಳನ್ನು ಸೆರೆಹಿಡಿಯುತ್ತದೆ. ಮೆದುಳಿನ ರಚನೆಯಲ್ಲಿನ ಅಸಹಜತೆ, ಬಾಲ್ಯದಲ್ಲಿ ತಲೆಗೆ ಆದ ಗಾಯ, ಮೆದುಳಿನ ಗೆಡ್ಡೆ ಮುಂತಾದವು.

ಈ ವಿಷಯಗಳ ಕೆಲವು ನಿದರ್ಶನಗಳನ್ನು ನೋಡಿ.

ಮೂರು ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ:

  1. MRI ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿರುವುದಿಲ್ಲ. ಆದ ಕಾರಣದಿಂದಲೇ ಕೆಲ ವೈದ್ಯರು ಮೆದುಳಿನ ಚಿತ್ರವನ್ನು ಪಡೆಯಲು C-T ಸ್ಕ್ಯಾನ್ ಅನ್ನು ಇದರ ಪರ್ಯಾಯವಾಗಿ ಬಳಸುತ್ತಾರೆ. ಆದರೆ C-T ಸ್ಕ್ಯಾನ್ ನಿಂದ ತೆಗೆದ ಚಿತ್ರವು M-R-I ನಷ್ಟು ಉತ್ತಮವಾಗಿರುವುದಿಲ್ಲ.ಅದಕ್ಕಾಗಿಯೇ ನಾನು, ಪ್ರತಿ ಅಪಸ್ಮಾರ/ಸೆಳವು ರೋಗಿಯು M-R-I ಮಾಡಿಸಬೇಕೆಂದು ಶಿಫಾರಸ್ಸು ಮಾಡುತ್ತೇನೆ.”3 ಟೆಸ್ಲಾ” ಹೆಸರಿನ M-R-I ಸಾಮಾನ್ಯ M-R-I ಗಿಂತ ಸ್ಪಷ್ಟವಾದ ಚಿತ್ರವನ್ನು ತೆಗೆಯುತ್ತದೆ. MRI ಕೂಡ ಮೆದುಳಿನಲ್ಲಿನ ಅತ್ಯಂತ ಸೂಕ್ಷ್ಮವಾದ ವಿಷಯಗಳನ್ನು ಪತ್ತೆ ಹಚ್ಚುವುದಿಲ್ಲ. 50% ಅಪಸ್ಮಾರ/ಸೆಳವು ಇರುವ ರೋಗಿಗಳಲ್ಲಿM-R-I ಯಾವುದೇ ರೋಗ ಇರುವ ಲಕ್ಷಣಗಳು ಇಲ್ಲ ಎಂದು ತೋರಿಸುತ್ತದೆ. ಆದರೆ ಇದು ಒಂದು ಒಳ್ಳೆಯ ವಿಚಾರವಾಗಿದೆ. ಏಕೆಂದರೆ, ಇದರರ್ಥ ನಿಮ್ಮ ಮೆದುಳಿನಲ್ಲಿನ ಸಮಸ್ಯೆಯ ಪ್ರಮಾಣ ತುಂಬಾ ಚಿಕ್ಕದಾಗಿದೆ ಎಂದು ಸೂಚಿಸುತ್ತದೆ.
  2. ಇ-ಇ-ಜಿ (EEG)ಇ-ಇ-ಜಿ ಮೆದುಳಿನಲ್ಲಿನ ವಿದ್ಯುತ್ ಚಟುವಟಿಕೆಯನ್ನು ಅಳೆಯುವ ಪರೀಕ್ಷೆಯಾಗಿದೆ.
EEG for Epilepsy in hindi
ಮೆದುಳಿನ ಒಂದು ಸ್ಥಳದ ವಿದ್ಯುತ್ ತರಂಗಗಳು ಅನಿಯಂತ್ರಿತವಾಗಿದ್ದರೆ, ಅದು E-E-G ನಲ್ಲಿ ಕಾಣುತ್ತದೆ.

 

ಉದಾಹರಣೆಗೆ ಈ ಮೇಲಿನ ಚಿತ್ರವನ್ನು ನೋಡಿ, ರೋಗಿಯ ತಲೆಯ ಮೇಲೆ ಇ-ಜಿ-ಜಿ ಯಂತ್ರವನ್ನು ಅಳವಡಿಸಲಾಗಿದೆ.

ಇದರಲ್ಲಿಯೂ ಸಹ ಮೂರು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ:

  1. ಇ-ಇ-ಜಿ ಮೆದುಳಿನ ವಿದ್ಯುತ್ ತರಂಗಗಳನ್ನು ಮಾತ್ರ ಅಳೆಯುತ್ತದೆಯೇ ಹೊರತು ಈ ಯಂತ್ರದಲ್ಲಿ ಯಾವುದೇ ವಿದ್ಯುತ್ ಉತ್ಪಾದನೆಯಾಗುವುದಿಲ್ಲ, ಆದ್ದರಿಂದ ಈ ಯಂತ್ರದಿಂದಾಗಿ ಮೆದುಳಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.
  2. ಇ-ಇ-ಜಿ ಯಿಂದ ಮೆದುಳಿನ ಅತಿಸೂಕ್ಷ್ಮ ವಿದ್ಯುತ್ ತರಂಗಗಳನ್ನು ಅಳೆಯಲು ಸಾಧ್ಯವಿಲ್ಲ. ಅಪಸ್ಮಾರ/ಮೂರ್ಛೆರೋಗ ಹೊಂದಿದ 50% ರೋಗಿಗಳಲ್ಲಿ, ಇ-ಇ-ಜಿ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ತೋರಿಸುತ್ತದೆ.
  3. ದೀರ್ಘಕಾಲ ಇ-ಇ-ಜಿ ಮಾಡುವುದು (ಉದಾಹರಣೆಗೆ 4 ಗಂಟೆಗಳ E-E-G) ಅನಿಯಂತ್ರಿತ ವಿದ್ಯುತ್ ತರಂಗಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
  4. ಇ-ಇ-ಜಿ ಮಾಡುವ  ಹಿಂದಿನ ರಾತ್ರಿ ಕಡಿಮೆ ನಿದ್ರೆ ಮಾಡುವುದರಿಂದ ಅನಿಯಂತ್ರಿತ ವಿದ್ಯುತ್ ತರಂಗವನ್ನು ನಿರ್ವಹಿಸುವ ಸಾಮರ್ಥ್ಯ ಹೆಚ್ಚುತ್ತದೆ. ಆದರೆ ಇದನ್ನು ನಿಮ್ಮ ವೈದ್ಯರು ಸೂಚಿಸಿದ್ದರೆ ಮಾತ್ರ ಪರಿಗಣಿಸಬೇಕು.

5At7hOYeTy

ಇತರ ಪರೀಕ್ಷೆಗಳು:

ಸಾಮಾನ್ಯವಾಗಿ ಸೆಳವು / ಅಪಸ್ಮಾರಕ್ಕೆ ಹೆಚ್ಚಿನ ಪರೀಕ್ಷೆಗಳ ಅಗತ್ಯವಿರುವುದಿಲ್ಲ.

ರಕ್ತದಲ್ಲಿನ ಅತಿಯಾದ ಅಥವಾ ಕಡಿಮೆ ಪ್ರಮಾಣದ ರಾಸಾಯನಿಕಗಳಿಂದಾಗಿ ಕೆಲವು ಮಕ್ಕಳು ಸೆಳವನ್ನು ಹೊಂದಿರಬಹುದು. ಅಂಥವರಿಗೆ ರಕ್ತ ಪರೀಕ್ಷೆಗಳು ಮಾಡಬೇಕಾಗುತ್ತದೆ.

ನಿಮ್ಮ ರೋಗನಿರ್ಣಯವು ಅಸ್ಪಷ್ಟವಾಗಿದ್ದರೆ ಅಥವಾ ಔಷಧಿಗಳು ನಿಮ್ಮ ಸೆಳವು ರೋಗಸ್ಥಿತಿಯನ್ನು ನಿಯಂತ್ರಿಸದಿದ್ದರೆ ದೀರ್ಘಾವಧಿಯ ವೀಡಿಯೊ-EEG ಗೆ ಒಳಗಾಗುವಂತೆ ವೈದ್ಯರು ವಿನಂತಿಸಬಹುದು.

EEG monitoring e1624179264106

ದೀರ್ಘಾವಧಿಯ ವೀಡಿಯೊ-EEG ಯಲ್ಲಿ, ರೋಗಿಯನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. 2 ರಿಂದ 7 ದಿನಗಳವರೆಗೆ ಮೆದುಳಿನ ವಿದ್ಯುತ್ ತರಂಗಗಳನ್ನು ಬಹಳ ಆಳವಾಗಿ ಅಭ್ಯಾಸ ಮಾಡಲಾಗುತ್ತದೆ. ಸೆಳವು / ಅಪಸ್ಮಾರ ರೋಗವನ್ನು ಪತ್ತೆ ಹಚ್ಚಲು ಇದು ಅತ್ಯುತ್ತಮ ಪರೀಕ್ಷೆಯಾಗಿದೆ. ಆದರೆ ಇದು ಸ್ವಲ್ಪ ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸ್ವಲ್ಪ ಹೆಚ್ಚು ಹಣ ಇರುವ ಕಾರಣ ಇದನ್ನು ಹೆಚ್ಚಾಗಿ ಬಳಸಲಾಗುವುದಿಲ್ಲ.

Epilepsy meaning in Kannada  ಕನ್ನಡದಲ್ಲಿ ಅಪಸ್ಮಾರದ ಅರ್ಥ (ಅಪಸ್ಮಾರದ ಅರ್ಥ) ದ ಇನ್ನೂ ಒಂದು ಹಂತವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಮುಂದುವರಿದಿದ್ದೀರಿ!

ಸರಿ, ಈಗ ನಮ್ಮ ಗಮನವನ್ನು ಚಿಕಿತ್ಸೆಯ ಕಡೆಗೆ ತಿರುಗಿಸೋಣ.

ಸೆಳವು ಬರುವುದನ್ನು ತಡೆಯಲು ಇರುವ ಚಿಕಿತ್ಸೆ (Treatment of Epilepsy meaning in Kannada) (ಕನ್ನಡದಲ್ಲಿ ಎಪಿಲೆಪ್ಸಿಯ ಚಿಕಿತ್ಸೆ ಅರ್ಥ)

Epilepsy meaning in Kannada ಕನ್ನಡದಲ್ಲಿ ಎಪಿಲೆಪ್ಸಿ ಅರ್ಥ (ಅಪಸ್ಮಾರ ಅರ್ಥ) ನೀವು ಈಗಾಗಲೇ ಇದಕ್ಕಾಗಿ ಯಾವ ಪರೀಕ್ಷೆಗಳನ್ನು ಮಾಡಬೇಕೆಂದು ತಿಳಿಯುಕೊಂಡಿದ್ದೀರಿ.

ಈಗ ಚಿಕಿತ್ಸೆಯ ಕಡೆಗೆ ಗಮನ ಹರಿಸೋಣ.

1) ಸೆಳವಿಗೆ ಇರುವ ಔಷಧಿಗಳು:

ಸೆಳವಿಗೆ ಚಿಕಿತ್ಸೆ ನೀಡಲು ಔಷಧಿಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಸೆಳವಿಗೆ, ಹಲವಾರು ಔಷಧಿಗಳು ಲಭ್ಯವಿದೆ. ಇಂಗ್ಲಿಷ್ ಭಾಷೆಯಲ್ಲಿ ಸೆಳವಿಗೆ ಇರುವ ಔಷಧಿಗಳ ಸಂಪೂರ್ಣ ಪಟ್ಟಿಯನ್ನು ಕೆಳಗೆ ತೋರಿಸಲಾಗಿದೆ: (ಇಲ್ಲಿ ಕ್ಲಿಕ್ ಮಾಡಿ)

medications 1853400 1920

ಇದರ ಜೊತೆಯಲ್ಲಿ, ಸೆಳವಿಗೆ ಈ ಕೆಳಗೆ ಕಾಣಿಸಿದ ಔಷಧಿಗಳು ಅತ್ಯಂತ ಸಾಮಾನ್ಯವಾಗಿದೆ:

ಇಂಗ್ಲೀಷ್ ಮತ್ತು ಕನ್ನಡದಲ್ಲಿ ಔಷಧಿಯ ಹೆಸರು ಟೀಕೆಗಳು
Phenobarbital

ಫೆನೋಬಾರ್ಬಿಟಲ್ – ಉದಾ. ಗಾರ್ಡಿನಲ್ ಮತ್ತು ಇತರೆ 

ಹಳತಾದ ಔಷಧಗಳು. ಇಂದು ಕಡಿಮೆ ಜನರು ಅವುಗಳನ್ನು ಬಳಸುತ್ತಾರೆ.
Phenobarbital

ಫೆನಿಟೋಯಿನ್ – ಉದಾ. ಎಪ್ಟೋಯಿನ್ ಇತ್ಯಾದಿ

ಹಳತಾದ ಔಷಧಿಗಳ ಅಡ್ಡಪರಿಣಾಮಗಳು ಸಹ ಸಂಭವಿಸಬಹುದು. ಆದರೆ ವೈದ್ಯರು ಈಗಲೂ ಅದನ್ನು ಬಳಸುತ್ತಾರೆ ಏಕೆಂದರೆ ಅದು ಅಗ್ಗವಾಗಿದೆ ಮತ್ತು ಪರಿಣಾಮಕಾರಿಯಾಗಿದೆ.
Carbamazepine, Oxcarbazepine

ಕಾರ್ಬಮಾಜೆಪೈನ್, ಆಕ್ಸ್ಕಾರ್ಬಜೆಪೈನ್ – ಉದಾ. ಟೆಗ್ರಿಟೆಲ್, ಆಕ್ಸಿಟಾಲ್ ಇತ್ಯಾದಿ 

ಹೊಸ ಔಷಧಗಳಾಗಿವೆ, ಸೂಕ್ತವಾಗಿ ಹೊಂದಿಕೊಳ್ಳುವ ರೋಗಿಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.
Valproate

ವಾಲ್ಪ್ರೋಟ್- ಉದಾ. ಡಿಪಾಕೋಟ್, ವಾಲ್ಪ್ರೊಯಿಕ್ ಇತ್ಯಾದಿ

ಹೊಸ ಔಷಧಗಳಾಗಿವೆ, ಸೂಕ್ತವಾಗಿ ಹೊಂದಿಕೊಳ್ಳುವ ರೋಗಿಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.
Levetiracetam, Brivaracetam

ಲೆವೆಟಿರಾಸೆಟಮ್, ಬ್ರಿವರಾಸೆಟಮ್ – ಉದಾ ಲೆವಿಪಿಲ್, ಲೆವೆರಾ, ಬ್ರೆವಿಪಿಲ್, ಬ್ರೆವಿಯಾಕ್ಟ್ ಇತ್ಯಾದಿ

ಆಧುನಿಕ ಔಷಧಗಳಾಗಿವೆ. ಕೆಲವೇ ಕೆಲವು ಅಡ್ಡಪರಿಣಾಮಗಳನ್ನು ಹೊಂದಿವೆ, ಅವು ಕೆಲವು ರೋಗಿಗಳ ಕೋಪವನ್ನು ಹೆಚ್ಚಿಸಬಹುದು.

ನಿಮ್ಮ ಸೆಳೆತದ ಲಕ್ಷಣ, ದೇಹದ ದೈಹಿಕ ಗುಣಲಕ್ಷಣ, ಸ್ವಭಾವ, ಆಲೋಚನಾ ಶಕ್ತಿ ಮುಂತಾದವುಗಳ ಆಧಾರದ ಮೇಲೆ ವೈದ್ಯರು ಈ ಔಷಧಿಗಳಲ್ಲಿ ಒಂದು ಅಥವಾ ಎರಡನ್ನು ಆಯ್ಕೆ ಮಾಡುತ್ತಾರೆ.

ಆದಾಗ್ಯೂ, ಆರಂಭಿಕ ಔಷಧವು ಪರಿಣಾಮ ಬೀರದಿರಬಹುದು. ವೈದ್ಯರು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಗಣಿಸಿ ಮತ್ತು ಇನ್ನೊಂದು ಔಷಧಿಯನ್ನು ಶಿಫಾರಸು ಮಾಡಿದರೂ ಸಹ ಆ ಔಷಧಿಯ ಪರಿಣಾಮ ಮತ್ತೆ ಬಾರದೇ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಸೆಳವಿನ ಕಾಯಿಲೆಯನ್ನು ದೂಷಿಸಬೇಕೇ ಹೊರತು ವೈದ್ಯರನ್ನು ಅಲ್ಲ .

ಈ ರೀತಿಯ ಸೆಳವು ಕಾಯಿಲೆಯನ್ನು “ರೆಫ್ರಕ್ಟೋರಿ ಎಲೆಪ್ಸಿ” (Refractory epilepsy) ಎಂದು ಕರೆಯಲಾಗುತ್ತದೆ. ಈ ವ್ಯಕ್ತಿಗಳಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಅಗತ್ಯವಿದೆ. 

ಸೆಳವಿನ ಸಂಭವಿಸುಕೆ 2-3 ಔಷಧಿಗಳೊಂದಿಗೆ ಕಡಿಮೆಯಾಗದಿದ್ದರೆ, ಸೆಳವಿನ ಶಸ್ತ್ರಚಿಕಿತ್ಸೆಯ ಬಗ್ಗೆ ಯೋಚಿಸಬೇಕಾಗುತ್ತದೆ.

2) ಸೆಳವು ಶಸ್ತ್ರಚಿಕಿತ್ಸೆ (ಅಪಸ್ಮಾರ ಶಸ್ತ್ರಚಿಕಿತ್ಸೆ) – Epilepsy Surgery in Kannada

ಸೆಳವಿನ ರೋಗ ಸ್ಥಿತಿಯು ಔಷಧಿಗಳಿಂದ ನಿಯಂತ್ರಿಸಲ್ಪಡದಿದ್ದರೆ ಶಸ್ತ್ರಚಿಕಿತ್ಸೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.

ಅನಿಯಂತ್ರಿತ ವಿದ್ಯುತ್ ಉತ್ಪಾದಿಸುವ ಮೆದುಳಿನ ಭಾಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗುತ್ತದೆ. ಇದು ಸೆಳೆತವನ್ನು ನಿಲ್ಲಿಸುತ್ತದೆ. ಮೆದುಳಿನ ಆರೋಗ್ಯಕರ ಭಾಗಗಳು ಸಮಾನವಾಗಿ ಕಾರ್ಯನಿರ್ವಹಿಸುತ್ತವೆ.

Temporal lobectomy surgery

ಸೆಳವು-ಶಸ್ತ್ರಚಿಕಿತ್ಸೆಯನ್ನು ತುಂಬಾ ಎಚ್ಚರಿಕೆಯಿಂದ ಮಾಡಬೇಕು, ಅಂದಾಗ ಮಾತ್ರ ಶಸ್ತ್ರಚಿಕಿತ್ಸೆಯ ನಂತರ ಸೆಳವಿನ ರೋಗ ಸ್ಥಿತಿಯನ್ನು ಗುಣಪಡಿಸಬಹುದು.

ವಾಗಸ್-ನರ್ವ್-ಸ್ಟಿಮ್ಯುಲೇಟರ್

ಆದಾಗ್ಯೂ, ಕೆಲವು ವ್ಯಕ್ತಿಗಳ ಮೆದುಳಿನಲ್ಲಿನ ಸೆಳವು ಉಂಟಾಗುವ ಭಾಗವನ್ನು ತೆಗೆಯಲು ಸಾಧ್ಯವಾಗುವುದಿಲ್ಲ , ತೆಗೆದ ನಂತರವೂ ಸಹ ಸೆಳವು ಮುಂದುವರಿಯುತ್ತದೆ. ಅಂತಹ ವ್ಯಕ್ತಿಗಳು ವಾಗಸ್-ನರ್ವ್-ಸ್ಟಿಮ್ಯುಲೇಟರ್  (Vagus Nerve Stimulator in Kannada- VNS  ಕನ್ನಡದಲ್ಲಿ ವಾಗಸ್ ನರ್ವ್ ಸ್ಟಿಮ್ಯುಲೇಟರ್) ಚಿಕಿತ್ಸಾ ವಿಧಾನವನ್ನು ಪರಿಗಣಿಸಬೇಕು.

VNS Vagus Nerve Stimulator

ವಾಗಸ್-ನರ್ವ್-ಸ್ಟಿಮ್ಯುಲೇಟರ್ ಇದು ಒಂದು ಸಣ್ಣ ಬ್ಯಾಟರಿಯಾಗಿದ್ದು, ಇದನ್ನು ಎದೆಯ ಚರ್ಮದ ಅಡಿಯಲ್ಲಿ ಇರಿಸಲಾಗುತ್ತದೆ. ಅದರಿಂದ ಹೊರಬರುವ ಸೂಕ್ಷ್ಮ ತಂತಿಯು ಕುತ್ತಿಗೆಯ ಚರ್ಮದ ಕೆಳಗಿರುವ ಸೂಕ್ಷ್ಮ ರಕ್ತನಾಳಕ್ಕೆ ಹೋಗುತ್ತದೆ. ಈ ಸಾಧನವನ್ನು ಇಡುವ ಪ್ರಕ್ರಿಯೆಯನ್ನು ತುಂಬಾ ಕಡಿಮೆ ಸಮಯದಲ್ಲಿ ಮುಗಿಸಬಹುದಾಗಿದೆ.

ಬ್ಯಾಟರಿಯಿಂದ ಬರುವ ವಿದ್ಯುತ್ ಪ್ರವಾಹವು ಸೆಳವು ಬರುವುದನ್ನು ತಡೆಯುತ್ತದೆ ಮತ್ತು ಮೆದುಳಿನ ಸಮತೋಲನವನ್ನು ಕಾಪಾಡುತ್ತದೆ. ಇದರಿಂದಾಗಿ 50% ರೋಗಿಗಳಲ್ಲಿ, ಸೆಳವು ರೋಗವು 50% ರಷ್ಟು ಕಡಿಮೆಯಾಗುತ್ತವೆ ಮತ್ತು 20% ರೋಗಿಗಳಲ್ಲಿ ಸೆಳವು ಸಂಪೂರ್ಣವಾಗಿ ನಿಲ್ಲುತ್ತವೆ.

ಸಂಕ್ಷಿಪ್ತವಾಗಿ:

  1. Epilepsy meaning in Kannada ಕನ್ನಡದಲ್ಲಿ ಎಪಿಲೆಪ್ಸಿ ಅರ್ಥ (ಅಪಸ್ಮಾರದ ಅರ್ಥ) ಅರ್ಥಮಾಡಿಕೊಳ್ಳುವ ಮೊದಲು, Seizure meaning in Kannada ಕನ್ನಡದಲ್ಲಿ ಸೆಳವಿನ ಅರ್ಥ (ಸೆಳವಿನ ರೋಗ ಸ್ಥಿತಿ) ಲೇಖನವನ್ನು ಓದುವುದು ಅವಶ್ಯಕವಾಗಿದೆ.
  2. ಸೆಳವು ಮತ್ತು ಅಪಸ್ಮಾರ ಇವೆರಡೂ ವಿಭಿನ್ನ ವಿಷಯವಾಗಿದೆ.
  3. ಸೆಳವು ಬರುವುದನ್ನು 1-2 ನಿಮಿಷಗಳ ರೋಗ ಸ್ಥಿತಿ ಎಂದು ಕರೆಯಲಾಗುತ್ತದೆ.
  4. Seizure meaning in Kannada ಕನ್ನಡದಲ್ಲಿ ಅಪಸ್ಮಾರದ ಅರ್ಥ (ಅಪಸ್ಮಾರದ ಅರ್ಥ) ಎಂದರೆ ಮಿದುಳು ಪದೇ ಪದೇ ಸೆಳವಿಗೆ ಒಳಗಾಗುವ ರೋಗ ಸ್ಥಿತಿಯಾಗಿದೆ.
  5. ಅಪಸ್ಮಾರವು ಹಲವಾರು ವಿಧಗಳನ್ನು ಒಳಗೊಂಡಿದೆ. ಇದರಲ್ಲಿ ಎಷ್ಟು ವಿಧಗಳಿವೆ ಎಂದರೆ, ಅವೆಲ್ಲವನ್ನೂ ಇಲ್ಲಿ ವಿವರಿಸುವುದು ಅಸಾಧ್ಯವಾಗಿದೆ.

ಅಪಸ್ಮಾರದ ಪರೀಕ್ಷೆಗಳು:

  1. M-R-I ಮೆದುಳಿನ ಚಿತ್ರಗಳನ್ನು ತೆಗೆಯಲು ಬಳಸುವ ಯಂತ್ರವಾಗಿದೆ. “3 ಟೆಸ್ಲಾ” M-R-I ಉನ್ನತ ದರ್ಜೆಯದ್ದಾಗಿದೆ.
  2. E-E-G ಮೆದುಳಿನ ವಿದ್ಯುತ್ ಚಟುವಟಿಕೆಯನ್ನು ಪರೀಕ್ಷಿಸಲು ಬಳಸಲಾಗುತ್ತದೆ.

ಅಪಸ್ಮಾರದ ಚಿಕಿತ್ಸೆ:

  1. ಅಪಸ್ಮಾರ / ಮೂರ್ಛೆ ರೋಗದ ಚಿಕಿತ್ಸೆಗಾಗಿ ಹಲವಾರು ಔಷಧಿಗಳು ಲಭ್ಯವಿದೆ.
  2. 2-3 ಔಷಧಿಗಳು ಫಲಕಾರಿಯಾಗದಿದ್ದರೆ, ಸೆಳವಿನ ಶಸ್ತ್ರಚಿಕಿತ್ಸೆ, ವಾಗಸ್-ನರ್ವ್-ಸ್ಟಿಮ್ಯುಲೇಟರ್ (VNS) ಅನ್ನು ಪರಿಗಣಿಸಬೇಕು.
  3. ಸೆಳವು ಶಸ್ತ್ರಚಿಕಿತ್ಸೆ ಅಥವಾ VNS ಗೆ ಪ್ರಪಂಚದಲ್ಲಿ ಯಾರೂ ಸಹ 100% ಗುಣಮುಖವಾಗುವ ಖಾತರಿಯನ್ನು ನೀಡುವುದಿಲ್ಲ. ಆದರೆ ಈ ಚಿಕಿತ್ಸೆಯನ್ನು ಜಾಗರೂಕತೆಯಿಂದ ಮತ್ತು ಗಮನದಿಂದ ಮಾಡುವುದರಿಂದ, ಅನೇಕ ರೋಗಿಗಳು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ.

Translated into Kannada by Mr. Akshay Bhat (click for profile).

ಡಾ. ಸಿದ್ಧಾರ್ಥ್ ಖಾರ್ಕರ್ (Dr. Siddharth Kharkar)
SidSmall e1592314383737

ಡಾ. ಸಿದ್ಧಾರ್ಥ್ ಖಾರ್ಕರ್ ಅವರನ್ನು ಮುಂಬೈನ ಪ್ರಸಿದ್ಧ ನರವಿಜ್ಞಾನಿಗಳಲ್ಲಿ ಒಬ್ಬರು ಎಂದು “ಔಟ್‌ಲುಕ್ ಇಂಡಿಯಾ” ಮತ್ತು “ಇಂಡಿಯಾ ಟುಡೆ” ನಂತಹ ನಿಯತಕಾಲಿಕೆಗಳು ಗುರುತಿಸಿವೆ. ಇವರು ಬೋರ್ಡ್ ಪ್ರಮಾಣೀಕೃತ (ಅಮೇರಿಕನ್ ಬೋರ್ಡ್ ಆಫ್ ಸೈಕಿಯಾಟ್ರಿ ಮತ್ತು ನ್ಯೂರಾಲಜಿ ಪ್ರಮಾಣೀಕೃತ) ನರವಿಜ್ಞಾನಿ.

ಡಾ. ಸಿದ್ಧಾರ್ಥ್ ಖಾರ್ಕರ್ ಮುಂಬೈನ (Best Epilepsy specialist in Mumbai, India) ಅಪಸ್ಮಾರ ತಜ್ಞ ಮತ್ತು ಮುಂಬೈ, ಮಹಾರಾಷ್ಟ್ರ, ಭಾರತದ ಪಾರ್ಕಿನ್‌ಸನ್‌ (Parkinson’s Disease Specialist) ನ ತಜ್ಞ.

ಇವರು ಮುಂಬೈನ KEM ಆಸ್ಪತ್ರೆ, ಬಾಲ್ಟಿಮೋರ್‌ನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ, ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (UCSF), USA ಮತ್ತು ಲಂಡನ್‌ನ ಕಿಂಗ್ಸ್ ಕಾಲೇಜು ಸೇರಿದಂತೆ ಭಾರತ, US ಮತ್ತು UK ಯ ಅತ್ಯುತ್ತಮ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದಾರೆ.

Call 022-4897-1800

Send Message

 

Caution: This information is not a substitute for professional care. Do not change your medications/treatment without your doctor's permission.
Dr. Siddharth Kharkar

Dr. Siddharth Kharkar

Dr. Siddharth Kharkar has been recognized as one of the best neurologists in Mumbai by Outlook India magazine and India today Magazine. He is a board certified (American Board of Psychiatry & Neurology certified) Neurologist.

Dr. Siddharth Kharkar is a Epilepsy specialist in Mumbai & Parkinson's specialist in Mumbai, Maharashtra, India.

He has trained in the best institutions in India, US and UK including KEM hospital in Mumbai, Johns Hopkins University in Baltimore, University of California at San Francisco (UCSF), USA & Kings College in London.

Call 022-4897-1800

Send Message


NeuroPlus Epilepsy & Parkinson's Clinic - Dr. Kharkar IconNeuroPlus Epilepsy & Parkinson's Clinic - Dr. Kharkar

near LIC, Dr Balabhai Nanavati hospital, near LIC, Swami Vivekananda Road, LIC Colony, Vile Parle

4.6 87 reviews

  • Avatar Paras Prabhu ★★★★★ 6 months ago
    Out patient is epileptic from about 10 years and her seizure gotten worse during the past year with the frequency of about 3-4 times a week.So we consulted … More Dr. Kharkar. He tried a few medicines, and within 1.5-2 months now the patient is feeling very well now. There are no seizures for 14 days currently.Dr. tried to keep medicines as minimum as possible. He also tried to keep the cost of the treatment minimum.When some of the medicines started showing side-effects, he was quick to switch the medicines to the better options.Overall I think we are getting a best of the available treatments. We thank you very much Dr. Kharkar.
  • Avatar Dr Shobha Sankhe ★★★★★ a month ago
    Dr Kharkar is gem of a doctor with tremendous patience, empathy, genuine concern for his patients .He guides them very methodically & scientifically … More for their neurological ill healthOur epilepsy patient is extremely happy with his treatment , Patient feels better by just visiting him too!May his selfless service to humanity flourish to reach all the needy patients!!
  • Avatar shrruti khanna ★★★★★ a month ago
    I consulted Dr Sidharth for my sister who has become very hyper and aggressive and we could not understand the issue. Keeping in mind she is someone with … More special needs Dr Sidharth was extremely understanding of the situation and did not put her through unnecessary investigation and avoided a very long stay at the hospital. He was infact more keen on her returning home to her natural environment. We highly appreciate Dr Sidharth for his effort and for looking into the matter with utmost care. It was a very difficult decision for my family to get my sister admitted but we are glad we did it under his care.Thankyou Doc.
  • Avatar Prashant Purohit ★★★★★ a month ago
    my name is prashant purohit. I m become completely bed ridden from last 9 months and was unable to walk. I couldnt find out the cause even after visiting … More many doctors and many hospital in Ahmedabad nd jodhpur.started losing hope. A good friend of mine suggested to visit a neurologist. After searching a lot, I came to know about Dr. Siddharth Kharkar and took his appointment in Nanavati Hospital. He examined and said that he suffered from \u201cPKD(PAROXYSMAL KNESIGENIC DYSKNESIA\u201c. He assured us to reverse this in 5 days time. And indeed this happened. I started recovering miraculously. today I am fully well fit I m walking as normal . Many Many thanks to Dr. Siddharth Kharkhar sir for giving me a new life.
  • Avatar Sanjay Pradhan ★★★★★ 7 months ago
    Dr. Kharkar is truly exceptional. He is extremely knowledgeable. But simultaneously, he is extremely patient and kind - taking the time and care to respond … More to all the questions. It is rare to come across a doctor who is not in a hurry to get on to the next patient, but instead, focuses on the one in front with full attention, expertise and compassion. A great experience.
  • Avatar N N ★★★★★ 10 months ago
    We visited Dr. Kharkhar for treatment regarding my mum - who is a multi-stroke patient and has aphasia. Certain medications were creating complications … More with her condition and Dr. Kharkhar was able to help mitigate the issue. We found him and his approach to be incredibly compassionate, considerate, individualized and patient-friendly. He advice is astute, up-to-date and empathetic. His treatment always comes from a deeply human place and is about seeing how to help the patient and their caregivers feel more at ease. Something that is quite rare and refreshing within the medical community.We feel that he genuinely cares about the patients that he is treating and is always kind and respectful in his communication. Moreover, his admin team is very efficient and prompt and it's a pleasure to deal with them.Would highly recommend Dr Kharkhar himself - though we must say our experience with Nanavati hospital itself has been less than ideal.Hope this helps.
  • Avatar Manish Ranjan ★★★★★ 10 months ago
    I have been visiting Dr Kharkar for treatment of my father. He is a very friendly doctor. He listens to our concerns with lot of patience. He also explains … More the issue in much greater details. He has really been of great help. My father is much better now.
  • Avatar Pinakin Shah ★★★★★ 8 months ago
    One of the best Dr. Gives complete attention and time to listen to patient's history, issues. Explains various options of treatment with pros and … More cons.
  • Avatar Lawrence Castellino ★★★★★ 10 months ago
    Exceptional experience with an expert,Dr. Kharkar is a knowledge house. It is rare nowadays to find doctors with patience, knowledge, and a flair for … More handling patient’s questions, besides Dr. Kharkar’s bedside manners are exemplary. I am privileged to be treated by such an amazing soul. I have told him and will repeat it here that “I am advancing my move back to India although I am a US Citizen, because I know I am in good hands and will be well taken care of. Thanks Dr. Kharkar for your selfless service!
  • Avatar Hemant Kansara ★★★★★ a year ago
    Great doctor!! Really appreciate.The doctor diagnosed to my sister correctly and start treatment, she has good improvement after taking medicine prescribed … More by doctor as no epilepsy attake. We have good experience with the doctor. Thank you

Leave a Comment

India Today Magazine - 2021Noted as one of the best Neurologist in Mumbai

Good Neurologist in Mumbai