ಸೆಳೆತದ ಅರ್ಥ (Seizure meaning in Kannada) (ಕನ್ನಡದಲ್ಲಿ ಸೀಜರ್ ಅರ್ಥ) ಮೆದುಳಿನ ನರಕೋಶಗಳಲ್ಲಿ ವಿದ್ಯುತ್ ತರಂಗಗಳು ಏರುಪೇರಾದ ಕಾರಣ ಬರುವ ಒಂದು ರೋಗ ಲಕ್ಷಣವಾಗಿದೆ. ಕನ್ನಡದಲ್ಲಿ ಅಪಸ್ಮಾರ ರೋಗಗ್ರಸ್ತವಾಗುವಿಕೆ ಅರ್ಥ (Seizure meaning in Kannada) ಎಂದರೇನು? ಅಪಸ್ಮಾರಕ್ಕೆ ಕಾರಣಗಳು, ವಿಧಗಳು ಮತ್ತು ಉತ್ತಮ ಚಿಕಿತ್ಸೆಯನ್ನು ತಿಳಿಯಿರಿ!
ಸೆಳವು ಬಂದಾಗ ದೇಹವು ತುಂಬಾ ಅಲುಗಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ.
ಆದರೆ ಈ ಅಸಹಜ ವಿದ್ಯುತ್ ತರಂಗಗಳು ಉಂಟುಮಾಡುವ ರೋಗಲಕ್ಷಣಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಈ ಸೆಳೆತದ ರೋಗಲಕ್ಷಣಗಳಲ್ಲಿ ಹಲವು ರೀತಿಗಳಿವೆ. ಇಂತಹ ಹೆಸರಿನ ಸೆಳೆತದ ರೋಗಲಕ್ಷಣಗಳು ನೂರಕ್ಕೂ ಹೆಚ್ಚು ಇವೆ.
ಈ ಸೆಳವಿನ ರೋಗಲಕ್ಷಣಗಳನ್ನು ನಿರ್ಲಕ್ಷಿಸಲಾಗುತ್ತದೆ. ಏಕೆಂದರೆ, ಸೆಳವು ಏನು ಎಂದು ಬಹುಪಾಲು ಜನರಿಗೆ ತಿಳಿದಿಲ್ಲ.
ಸೆಳವು ಇರುವ ಮೆದುಳಿನ ಭಾಗವನ್ನು ಅವಲಂಬಿಸಿ, ಈ ರೋಗಲಕ್ಷಣಗಳನ್ನು 2 ವಿಧಗಳಾಗಿ ವಿಂಗಡಿಸಲಾಗಿದೆ:
ಸೆಳವಿನ 2 ಮುಖ್ಯ ವಿಧಗಳು |
|
ಸೆಳವು ಉಂಟಾಗುವಿಕೆಯ ಅರ್ಥವನ್ನು ಸಂಪೂರ್ಣವಾಗಿ ತಿಳಿಯಲು , ನಾವು ಈ ಕೆಳಗಿನ ವಿಷಯಗಳನ್ನು ತಿಳಿದುಕೊಳ್ಳಬೇಕು:
- ಸೆಳವು ಏಕೆ ಸಂಭವಿಸುತ್ತವೆ?
- ಸೆಳೆವಿನ ಲಕ್ಷಣಗಳು ಯಾವುವು?
- ಸೆಳವನ್ನು ಹೇಗೆ ಗುರುತಿಸಲಾಗುತ್ತದೆ?
- ಸೆಳವಿಗೆ ಚಿಕಿತ್ಸೆ ಏನು?
ಸೆಳವು ಪದೇ ಪದೇ ಸಂಭವಿಸಿದಲ್ಲಿ ಮತ್ತು ನಿಮ್ಮ ಮೆದುಳು ಅವುಗಳಿಗೆ ಒಗ್ಗಿಕೊಂಡಿದ್ದರೆ ಈ ಸ್ಥಿತಿಯನ್ನು ಅಪಸ್ಮಾರ ( ಮೂರ್ಛೆ ರೋಗ , ಮಲರೋಗ ) ಎಂದು ಕರೆಯಲಾಗುತ್ತದೆ.
ಸೆಳವು ಸಂಭವಿಸುವಿಕೆಯ ಬಗ್ಗೆ ಓದಿದ ನಂತರ, ಇಲ್ಲಿಗೆ ಹಿಂತಿರುಗಿ ಮತ್ತು ಇದನ್ನು ಒತ್ತಿರಿ: (Meaning of Epilepsy in Kannada – ಕನ್ನಡದಲ್ಲಿ ಅಪಸ್ಮಾರದ ಅರ್ಥ )
ಕನ್ನಡ ನಮ್ಮ ರಾಜ್ಯದ ಭಾಷೆ ಆಗಿರುವುದರಿಂದ, ಹೆಚ್ಚಿನ ಜನರಿಗೆ ಕನ್ನಡದಲ್ಲಿ ಸೆಳವಿನ ಅರ್ಥ ತಿಳಿದಿದೆ. (Seizure meaning in Kannada) ಬನ್ನಿ, ನಾನು “ಸೆಳವು” ಪದದ ಅರ್ಥವನ್ನು ತಿಳಿಸಲು ಪ್ರಯತ್ನಿಸುತ್ತೇನೆ!
ನಾನು ಡಾ ಸಿದ್ಧಾರ್ಥ್ ಖಾರ್ಕರ್, ಥಾಣೆಯಲ್ಲಿರುವ ನರರೋಗ ತಜ್ಞ (Neurologist in Thane), ಭಾರತ, ಮಹಾರಾಷ್ಟ್ರ . ನಾನು ಮುಂಬೈ (Neurologist in Mumbai)ನಲ್ಲಿ ನರವಿಜ್ಞಾನಿಯಾಗಿಯೂ ಕೆಲಸ ಮಾಡುತ್ತೇನೆ. ಬನ್ನಿ, ಈ ಪ್ರಮುಖ ವಿಷಯದ ಬಗ್ಗೆ ಒಟ್ಟಿಗೆ ಕಲಿಯೋಣ. ನಾನು ಭಾರತದಲ್ಲಿ (Epilepsy specialist in India) ಅಪಸ್ಮಾರ ತಜ್ಞ ಮತ್ತು ನಾನು ಭಾರತದಲ್ಲಿ ಎಪಿಲೆಪ್ಸಿ ಶಸ್ತ್ರಚಿಕಿತ್ಸೆಯನ್ನು ಒದಗಿಸುತ್ತೇನೆ (Epilepsy surgery in India).
ಕನ್ನಡದಲ್ಲಿ ಅಪಸ್ಮಾರ ರೋಗಗ್ರಸ್ತವಾಗುವಿಕೆ ಅರ್ಥ (Seizure meaning in Kannada) ಬನ್ನಿ, ನಾನು “ಸೆಳವು” ಪದದ ಅರ್ಥವನ್ನು ತಿಳಿಸಲು ಪ್ರಯತ್ನಿಸುತ್ತೇನೆ! (Seizure meaning in Kannada)
Table of Contents
ನಮ್ಮ ಮೆದುಳಿನ ಕಾರ್ಯಗಳು
ನಮ್ಮ ಮೆದುಳು ವಿದ್ಯುತ್ ತರಂಗಗಳು ಮತ್ತು ರಾಸಾಯನಿಕಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ.

ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಕೇತವನ್ನು ನೀಡಲು ಬಯಸಿದಾಗ, ನಮ್ಮ ಮಿದುಳು ಅಲ್ಲಿ ಸಣ್ಣ ವಿದ್ಯುತ್ ತರಂಗಗಳನ್ನು ಕಳುಹಿಸುತ್ತದೆ.
ನಮ್ಮ ಮೆದುಳಿನಲ್ಲಿ, ಲಕ್ಷಾಂತರ ಈ ಸಣ್ಣ ತರಂಗಗಳು ನಿರಂತರವಾಗಿ ಹರಿಯುತ್ತಿರುತ್ತವೆ.
ಈ ಎಲ್ಲಾ ತರಂಗಗಳು ಮೆದುಳಿನ ನಿಯಂತ್ರಣದಲ್ಲಿರುತ್ತದೆ.
ಮೆದುಳು ನಿಮ್ಮ ಕೈಯನ್ನು ನೀವು ಬಯಸಿದಾಗ ಮಾತ್ರ ಚಲಿಸುವಂತೆ ಮಾಡುತ್ತದೆ ಮತ್ತು ಬಾಯಿಯನ್ನು ನೀವು ಬಯಸಿದಾಗ ಮಾತ್ರ ಧ್ವನಿಸುವಂತೆ ಮಾಡುತ್ತದೆ.
ಫೋಕಲ್ ಸೆಳೆವು ಏಕೆ ಸಂಭವಿಸುತ್ತವೆ (Focal Seizure meaning in Kannada) (ಕನ್ನಡದಲ್ಲಿ ಫೋಕಲ್ ಸೀಜರ್ ಅರ್ಥ) ?
ಈಗ, ಮೆದುಳಿನ ಎರಡು ಚಿಕ್ಕ ನರಗಳು ಒಂದರಿಂದ ಇನ್ನೊಂದಕ್ಕೆ ಅಂಟಿಕೊಂಡಿದೆ ಎಂದು ಊಹಿಸಿಕೊಳ್ಳಿ. ಇದನ್ನು ಆಂಗ್ಲ ಭಾಷೆಯಲ್ಲಿ, ಕ್ರಾಸ್-ಕನೆಕ್ಷನ್ ಎಂದು ಉಲ್ಲೇಖಿಸುತ್ತೇವೆ.
ಅಂತಹ ಸಮಯದಲ್ಲಿ ಏನಾಗುತ್ತದೆ?
ಹೌದು, ಇದು ಅನಿಯಂತ್ರಿತ ವಿದ್ಯುತ್ ಪ್ರವಾಹವನ್ನು ಹೊಂದಿರುತ್ತದೆ. ಯಾವುದೇ ಕಾರಣವಿಲ್ಲದೆ, ವಿದ್ಯುತ್ ತರಂಗಗಳು ಹರಿದುಬರಲು ಪ್ರಾರಂಭಿಸುತ್ತದೆ.

ಅನಿಯಂತ್ರಿತ ವಿದ್ಯುತ್ ಹರಿವು ಮೆದುಳಿನ ಒಂದು ಭಾಗಕ್ಕೆ ಮಾತ್ರ ಸೀಮಿತವಾದಾಗ, ಈ ಲಕ್ಷಣಗಳು ಕಂಡುಬರುತ್ತವೆ :
- ಕೈ ಚಲನೆಯನ್ನು ನಿಯಂತ್ರಿಸುವ ಮೆದುಳಿನ ಪ್ರದೇಶದಲ್ಲಿನ ವಿದ್ಯುತ್ ಅನಿಯಂತ್ರಿತವಾಗಿದ್ದರೆ , ಕೈ ಸ್ವಯಂ ಬಡಿಯಲು ಪ್ರಾರಂಭಿಸುತ್ತದೆ.
- ಮಿದುಳಿನ ವಾಸನೆ ಗ್ರಹಿಸುವ ಜಾಗದಲ್ಲಿ ವಿದ್ಯುತ್ ಪ್ರವಾಹವು ನಿಯಂತ್ರಣದಲ್ಲಿಲ್ಲದಿದ್ದರೆ ಯಾವುದೇ ಕಾರಣವಿಲ್ಲದೆ , ತುಂಬಾ ಒಳ್ಳೆಯ ಅಥವಾ ಕೆಟ್ಟ ವಾಸನೆಯನ್ನು ಅನುಭವಿಸಬಹುದು.
ಉದಾಹರಣೆಗೆ, ಡಾ. ಜನಕ್ ಪಟೇಲ್ ಅವರು ಪೋಸ್ಟ್ ಮಾಡಿದ ಈ ವೀಡಿಯೊವನ್ನು ನೋಡಿ. ಫೋಕಲ್ ಸೆಳವಿನ ಪರಿಣಾಮವಾಗಿ ಈ ರೋಗಿಯ ಎಡ ಕಾಲು ಮಾತ್ರ ಚಲಿಸುತ್ತಿದೆ.
ಇದನ್ನು ಇಂಗ್ಲೀಷಿನಲ್ಲಿ “Focal Seizure” ಎಂದು ಕರೆಯಲಾಗುತ್ತದೆ. ನೀವು ಇದನ್ನು ಕನ್ನಡದಲ್ಲಿ “ಸಣ್ಣ ಸೆಳೆವು” ಎಂದು ಕರೆಯಬಹುದು.
ದೊಡ್ಡ ಸೆಳೆವು ಏಕೆ ಸಂಭವಿಸುತ್ತದೆ (Generalized Seizure meaning in Kannada) (ಕನ್ನಡದಲ್ಲಿ ಸಾಮಾನ್ಯೀಕರಿಸಿದ ಸೆಳವು ಅರ್ಥ)?
ಕೆಲವೊಮ್ಮೆ, 10 ರಿಂದ 15 ಸೆಕೆಂಡುಗಳಲ್ಲಿ, ಈ ಅನಿಯಂತ್ರಿತ ವಿದ್ಯುತ್ ಇಡೀ ಮೆದುಳಿನಾದ್ಯಂತ ಹರಡುತ್ತದೆ.
ಇದು ಪ್ರತಿಬಾರಿ ಸಂಭವಿಸುವುದಿಲ್ಲ. ಆದಾಗ್ಯೂ, ಇದು ಸಂಭವಿಸಿದಾಗ, ದೇಹವು ಬಹಳಷ್ಟು ನಡುಗಲು ಪ್ರಾರಂಭಿಸುತ್ತದೆ.

ದೊಡ್ಡ ಸೆಳವಿನ ಸಮಯದಲ್ಲಿ ವ್ಯಕ್ತಿಯು ಪ್ರಜ್ಞಾಹೀನನಾಗುತ್ತಾನೆ ಮತ್ತು ಕೆಲವೊಮ್ಮೆ ಅವನು ತನ್ನ ನಾಲಿಗೆಯನ್ನು ಕಚ್ಚುತ್ತಾನೆ, ಕಣ್ಣು ಗುಡ್ಡೆಗಳು ಮೇಲಕ್ಕೆ ಸೇರುತ್ತವೆ ಮತ್ತು ತನಗೆ ಅರಿವಿಲ್ಲದೇ ಮಲ ಮೂತ್ರಗಳನ್ನು ವಿಸರ್ಜಿಸುತ್ತಾನೆ.
ಹಾಗೆ, ಈ ವ್ಯಕ್ತಿಯನ್ನು ನೋಡಿ. ಅವನ ಮೆದುಳಿನಾದ್ಯಂತ ಅನಿಯಂತ್ರಿತ ವಿದ್ಯುತ್ ತರಂಗಗಳ ಹರಡುವಿಕೆಯ ಪರಿಣಾಮವಾಗಿ ಅವನ ಇಡೀ ದೇಹವು ತೀವ್ರವಾಗಿ ಕಂಪಿಸುತ್ತಿದೆ.
ದೊಡ್ಡ ಸೆಳವು ಸಾಮಾನ್ಯವಾಗಿ 1-2 ನಿಮಿಷಗಳವರೆಗೆ ಇರುತ್ತದೆ.ದೊಡ್ಡ ಸೆಳವು ಬಂದಂತಹ ಸಂಧರ್ಭದಲ್ಲಿ ವ್ಯಕ್ತಿಯು ಆಯಾಸಗೊಳ್ಳುತ್ತಾನೆ. ಅವನು ಸಂಪೂರ್ಣವಾಗಿ ಚೇತರಿಸಿಕೊಳ್ಳಲು 20 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು.ಇದನ್ನು ಆಂಗ್ಲ ಭಾಷೆಯಲ್ಲಿ Generalized Seizure ಎನ್ನುತ್ತಾರೆ. ನೀವು ಇದನ್ನು ಕನ್ನಡದಲ್ಲಿ ದೊಡ್ಡ ಸೆಳೆವು ಎಂದು ಕರೆಯಬಹುದು.
ದೊಡ್ಡ ಸೆಳವು ಸಾಮಾನ್ಯವಾಗಿ 1-2 ನಿಮಿಷಗಳವರೆಗೆ ಇರುತ್ತದೆ.
ದೊಡ್ಡ ಸೆಳವು ಬಂದಂತಹ ಸಂಧರ್ಭದಲ್ಲಿ ವ್ಯಕ್ತಿಯು ಆಯಾಸಗೊಳ್ಳುತ್ತಾನೆ. ಅವನು ಸಂಪೂರ್ಣವಾಗಿ ಚೇತರಿಸಿಕೊಳ್ಳಲು 20 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು.
ಇದನ್ನು ಆಂಗ್ಲ ಭಾಷೆಯಲ್ಲಿ Generalized Seizure ಎನ್ನುತ್ತಾರೆ. ನೀವು ಇದನ್ನು ಕನ್ನಡದಲ್ಲಿ ದೊಡ್ಡ ಸೆಳೆವು ಎಂದು ಕರೆಯಬಹುದು.
ಸೆಳವು ಸಂಭವಿಸಿದಾಗ ಮೆದುಳಿನಲ್ಲಿನ ವಿದ್ಯುತ್ ತರಂಗಗಳ ಹರಿವು ಏಕೆ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ?
ಈಗ ಸ್ವಲ್ಪ ವಿಷಯದ ಆಳಕ್ಕೆ ಹೋಗೋಣ.
Seizure meaning in Kannada (ಕನ್ನಡದಲ್ಲಿ ಸೆಳವಿನ ಅರ್ಥ) ಸೆಳವಿನ ಅರ್ಥವು ಕನ್ನಡದಲ್ಲಿ ನಿಮಗೆ ಸುಲಭವಾಗಿ ಅರ್ಥವಾಗಲು, ಮೆದುಳಿನಲ್ಲಿನ ಅಡ್ಡ-ಸಂಪರ್ಕ ಅನಿಯಂತ್ರಿತ ವಿದ್ಯುತ್ ತರಂಗಗಳ ಹರಿವಿಗೆ ಕಾರಣವಾಗುತ್ತದೆ ಎಂದು ನಾನು ಸೂಚಿಸಿದ್ದೇನೆ.
ಈ ಅಡ್ಡ-ಸಂಪರ್ಕಕ್ಕೆ ನಿಜವಾದ ಕಾರಣವನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟಕರವಾಗಿದೆ. ಆದ್ದರಿಂದ, ನಾನು ಅದರ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇನೆ. ಸೆಳೆವಿನ ಕಾರಣಗಳಿಗೆ ಹೆಚ್ಚಿನ ತಿದ್ದುಪಡಿಗಳನ್ನು ನೀವು ಬಯಸಿದರೆ, ಇಲ್ಲಿ ಕ್ಲಿಕ್ ಮಾಡಿ [ಡಾ. ಬಾಲೆಸ್ಟ್ರಿನಿ ಬರೆದ ಲೇಖನ, ಇಂಗ್ಲಿಷ್‌ನಲ್ಲಿ].
ಕಾರಣ 1. ಸ್ನಾಯು ನಾಳಗಳು ಒಡೆದಾಗ: ಮೆದುಳಿನ ಸ್ನಾಯುಗಳಲ್ಲಿ ಕೋಶಗಳು ಪ್ರವೇಶಿಸಲು ಮತ್ತು ನಿರ್ಗಮಿಸಲು ಸಣ್ಣ ಮಾರ್ಗವಿರುತ್ತದೆ . ಈ ನಾಳಗಳಲ್ಲಿ ಯಾವುದೇ ನಾಳವು ಒಡೆದರೆ, ಸೆಳೆವು ಸ್ಥಿತಿ ಉಂಟಾಗಬಹುದು.
ಕಾರಣ 2. ಗರ್ಭಾಶಯದಲ್ಲಿ ಮಗುವಿನ ಅನಿಯಮಿತ ಬೆಳವಣಿಗೆ : ನಮ್ಮ ಮೆದುಳು ಸಂಪೂರ್ಣವಾಗಿ ಗರ್ಭಾಶಯದಲ್ಲಿ ಅಭಿವೃದ್ಧಿಗೊಂಡಿದೆ. ಭ್ರೂಣದಲ್ಲಿರುವಾಗ ಮೆದುಳಿನ ಬೆಳವಣಿಗೆಯಲ್ಲಿ ಯಾವುದೇ ಅಡಚಣೆ ಉಂಟಾದರೆ, ಸೆಳೆವು ಕಾಯಿಲೆ ಬರಬಹುದು.

ಕಾರಣ 3 . ರಕ್ತದಲ್ಲಿನ ಹಾನಿಕಾರಕ ರಾಸಾಯನಿಕಗಳು: ಯಕೃತ್ತು ಅಥವಾ ಮೂತ್ರಪಿಂಡದ ಕಾಯಿಲೆಯ ಪರಿಣಾಮವಾಗಿ ಕೆಲವೊಮ್ಮೆ ಕೆಟ್ಟ ರಾಸಾಯನಿಕಗಳು ರಕ್ತದಲ್ಲಿ ಸಂಗ್ರಹವಾಗಬಹುದು. ಇವುಗಳಿಂದ ಸೆಳೆವು ಕಾಯಿಲೆ ಬರಬಹುದು.
ಕಾರಣ 4 . ಜನನದ ನಂತರ ಮಿದುಳಿನ ಗಾಯ: ಪಾರ್ಶ್ವವಾಯು, ಅಪಘಾತ, ಅಥವಾ ಮೆದುಳಿನ ಗೆಡ್ಡೆಯಿಂದ ಉಂಟಾಗುವ ಗಂಭೀರವಾದ ಮಿದುಳಿನ ಗಾಯದಿಂದ ಸೆಳೆವು ಉಂಟಾಗಬಹುದು.
ಸೆಳೆವಿನ ಇತರ ಲಕ್ಷಣಗಳು
ಸೆಳೆತವು ವಿವಿಧ ರೀತಿಯಲ್ಲಿ ಪ್ರಕಟವಾಗಬಹುದು.
ಆದರೆ ಮೆದುಳಿನ ಕೆಲವು ಭಾಗಗಳಲ್ಲಿ ಸೆಳೆವು ಹೆಚ್ಚಾಗಿ ಸಂಭವಿಸುತ್ತವೆ. ಅದಕ್ಕಾಗಿಯೇ ಈ ಭಾಗಗಳಿಂದ ರೋಗಲಕ್ಷಣಗಳು ಹೆಚ್ಚಾಗಿ ಕಂಡುಬರುವುದನ್ನು ನಾವು ನೋಡುತ್ತೇವೆ.
ಪದೇ ಪದೇ ಬರುವ ಸೆಳೆವಿನ ಲಕ್ಷಣಗಳು |
1.ಘಾಟು ವಾಸನೆ ಅಥವಾ ತುಂಬಾ ಸುಗಂಧದ ಪರಿಮಳ ಬರುವುದು 2.ಕೊಳಕು ರುಚಿ: ಕೆಲವರು ಬಾಯಿಯಲ್ಲಿ ಲೋಹೀಯ ಅಥವಾ ರಕ್ತದ ರುಚಿಯನ್ನು ಅನುಭವಿಸುತ್ತಾರೆ. 3.ಇದ್ದಕ್ಕಿದ್ದಂತೆ ತುಂಬಾ ಭಯ ಅಥವಾ ಆತಂಕ ಉಂಟಾಗುತ್ತದೆ 4.ಜ್ಞಾಪಕ ಶಕ್ತಿ ಸಮಸ್ಯೆ – ಇದು ನನಗೆ ಸಂಭವಿಸಿದೆ ಎಂದು ರೋಗಿಯು ಭಾವಿಸುತ್ತಾನೆ! 5.ಹಠಾತ್ ದೃಷ್ಟಿ ಭ್ರಮೆಗಳನ್ನು ಹೊಂದಿರುವುದು (ದುಃಸ್ವಪ್ನಗಳು). 6.ದೇಹದ ಭಾಗಗಳು/ಕೈಗಳು ಅಥವಾ ಪಾದಗಳಲ್ಲಿ ಜುಮ್ಮೆನ್ನುವುದು 7.ದೇಹದ/ಕೈ ಅಥವಾ ಕಾಲಿನ ಭಾಗದಲ್ಲಿ ನಡುಕ ಉಂಟಾಗುವುದು 8.ಸ್ವಂತ ಆಲೋಚನೆಗಳಲ್ಲಿ ಲೀನವಾಗುವುದು ಮತ್ತು ಪ್ರತಿಕ್ರಿಯಿಸದಿರುವುದು. |
ಉತ್ತಮ ಉದಾಹರಣೆಗಾಗಿ, ಈ ಹುಡುಗನನ್ನು ನೋಡಿ. ಇವನು ತನ್ನದೇ ಆಲೋಚನೆಗಳಲ್ಲಿ ಕಳೆದುಹೋಗಿದ್ದಾನೆ ಮತ್ತು ನಂತರ ದುಃಸ್ವಪ್ನ ಕಂಡಂತೆ ಎಚ್ಚರಗೊಳ್ಳುತ್ತಾನೆ :
YouTube – ಡಾ. ರಾಜೀವ್ ಗುಪ್ತಾ ಅವರ ವೀಡಿಯೊಗಳು:
ಆದರೆ ಈ ಮೊದಲೇ ಹೇಳಿದಂತೆ, ಸೆಳೆವು ಯಾವುದೇ ರೋಗಲಕ್ಷಣಗಳನ್ನು ಹೊಂದಿರಬಹುದು, ಸೆಳೆವಿನ ಅಸಾಮಾನ್ಯ ಲಕ್ಷಣಗಳು ಇಲ್ಲಿವೆ:
ಸೆಳವು ಅಸಾಮಾನ್ಯ ಲಕ್ಷಣಗಳು
ಸೆಳವಿನ ಅಸಾಮಾನ್ಯ ಲಕ್ಷಣಗಳು |
---|
1.ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಕೋಪಗೊಳ್ಳುವುದು 2.ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ತುಂಬಾ ಸಂತೋಷ ಅಥವಾ ತುಂಬಾ ದುಃಖ ಪಡುವುದು. 4.ದೇಹದಿಂದ ತೇಲುವ ಭಾವನೆ 4.ಹಠಾತ್ ವಾಕರಿಕೆ / ವಾಂತಿಯ ಭಾವನೆ 5.ಹಠಾತ್ ಮೂತ್ರ ಬರುವಂತಹ ಭಾವನೆ 6.ತಲೆತಿರುಗುವಿಕೆ 7 ವಿಚಿತ್ರ ಶಬ್ದಗಳನ್ನು ಕೇಳುವ ಭಾವನೆ 8.ವೇಗವಾಗಿ ಕಣ್ಣು ಮಿಟುಕಿಸುವುದು |
ಸೆಳವಿಗೆ ಇಂಗ್ಲಿಷ್‌ನಲ್ಲಿ ಇಷ್ಟೊಂದು ಹೆಸರುಗಳು ಏಕೆ?
ನೀವು ಈಗ Seizure meaning in kannada (ಕನ್ನಡದಲ್ಲಿ ಸೀಜರ್ ಅರ್ಥ) ವನ್ನು ತಿಳಿದುಕೊಂಡಿದ್ದೀರಿ. ರೋಗಲಕ್ಷಣಗಳನ್ನು ಸರಳ ಪದಗಳಲ್ಲಿ ತಿಳಿಸುವುದರಿಂದ, ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.
ಆದರೆ ವೈದ್ಯರು ಇಂತಹ ಸರಳ ಹೆಸರುಗಳಿಂದ ತೃಪ್ತರಾಗುವುದಿಲ್ಲ !!!
ಎಲ್ಲಾ ಹಾಸ್ಯವನ್ನು ಬದಿಗಿಟ್ಟು, ಕಷ್ಟಕರವಾದ ಇಂಗ್ಲಿಷ್ ಹೆಸರುಗಳು ಹೆಚ್ಚಾಗಿ ಅಗತ್ಯವಿಲ್ಲ. ಆದರೆ ಈ ಪದಗಳು ಸೆಳವಿನ ರೋಗಲಕ್ಷಣಗಳನ್ನು ನಿಮಗೆ ವಿವರಿಸಲು ನನಗೆ ಸುಲಭವಾಗುತ್ತದೆ.
ಸೆಳವಿಗೆ ಇರುವ ಹೆಸರುಗಳಿಗಿಂತ ಇದರ ರೋಗಲಕ್ಷಣಗಳ ಮೇಲೆ ನೀವು ಹೆಚ್ಚು ಗಮನಹರಿಸಬೇಕು. ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರಲ್ಲಿ ಇದೇ ರೀತಿಯ ರೋಗಲಕ್ಷಣಗಳು ಕಂಡುಬಂದರೆ ನೀವು ಅದನ್ನು ಗುರುತಿಸಬಹುದು.
.

ಸೆಳವು ಉಂಟಾಗುವಿಕೆಯೊಂದಿಗೆ ಬರುವ ರೋಗಲಕ್ಷಣಗಳ ಆಧಾರದ ಮೇಲೆ, ಹಲವಾರು ವೈಜ್ಞಾನಿಕ ಹೆಸರುಗಳನ್ನು ನೀಡಲಾಗಿದೆ:
(Focal Seizures Meaning in Kannada & Names) ಸಣ್ಣ ಸೆಳವಿನ ಲಕ್ಷಣಗಳು ಮತ್ತು ಹೆಸರುಗಳು
ನಾವು ಈಗಾಗಲೇ ಅರ್ಥಮಾಡಿಕೊಂಡಂತೆ, ಸಣ್ಣ ಸೆಳವು ಮೆದುಳಿನ ಒಂದು ಭಾಗದಲ್ಲಿ ಮಾತ್ರ ಸಂಭವಿಸುತ್ತವೆ. ಇದು ಕಡಿಮೆ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.
Focal Seizure meaning in Kannada (ಕನ್ನಡದಲ್ಲಿ ಫೋಕಲ್ ಸೀಜರ್ ಅರ್ಥ) ತಿಳಿದುಕೊಳ್ಳಲು ಈ ಸಣ್ಣ ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.
ಈ ಸಣ್ಣ ಸೆಳವಿನ ಇಂಗ್ಲಿಷ್ ಹೆಸರುಗಳು ಆಟೋಮ್ಯಾಟಿಸಮ್ (automatism seizure) , ಡೆಜ್ ವು (déj vu seizure) ಮುಂತಾದವುಗಳಾಗಿವೆ. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಕೆಳಗಿನ ಅಡ್ಡ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ:
ಉದಾಹರಣೆಗೆ ಈ ಹುಡುಗಿಯನ್ನೇ ತೆಗೆದುಕೊಳ್ಳಿ. ಆಡುತ್ತಿರುವಾಗ , ಅವಳು ದಿಗ್ಭ್ರಮೆಗೊಳ್ಳುತ್ತಾಳೆ ಮತ್ತು ಅವಳ ಬಲಗಣ್ಣು ಸೆಳೆತಕ್ಕೆ ಒಳಗಾಗುತ್ತದೆ. ಇದನ್ನು ಆಟೋಮ್ಯಾಟಿಸಮ್ ಎಂದು ಕರೆಯಲಾಗುತ್ತದೆ ಮತ್ತು ಇದು ಸೆಳೆತದ ಒಂದು ರೂಪವಾಗಿದೆ.
ಸಣ್ಣ ಸೆಳವಿನ ಹೆಸರು | ಸಣ್ಣ ಸೆಳವಿನ ಲಕ್ಷಣಗಳು (Focal Seizure meaning in Kannada) |
---|---|
ಆಟೊಮ್ಯಾಟಿಸಂ | ರೋಗಿಯು ಕೈಗಳನ್ನು ಉಜ್ಜುವುದು, ಅತಿಯಾಗಿ ಮಾತನಾಡುವುದು ಮತ್ತು ನಾಲಿಗೆಯನ್ನು ಚಾಚುವುದು (lip smacking seizure) ಮುಂತಾದ ವರ್ತನೆಗಳನ್ನು ಅನೈಚ್ಛಿಕವಾಗಿ ಮಾಡುತ್ತಾನೆ. |
ಡಿಸ್ಸೋಷಿಯೇಟಿವ್ ಸೀಜರ್ | ರೋಗಿಯು ತನ್ನದೇ ಆದ ಸ್ವಂತ ಆಲೋಚನೆಗಳಲ್ಲಿ ಕಳೆದುಹೋಗುತ್ತಾನೆ. ಅವನು ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ. |
ದೇಜ ವು ಸೀಜರ್ | ವ್ಯಕ್ತಿಯು ವಿಚಿತ್ರವಾಗಿ ಭಾವಿಸುತ್ತಾನೆ. ಅವನು “ಓಹ್!” ಇದು ನನಗೆ ಸಂಭವಿಸಿದೆ. |
ಜಾಮೆ-ವೂ ಸೀಜರ್ | ರೋಗಿಯು ವಿಚಿತ್ರವಾಗಿ ಭಾವಿಸುತ್ತಾನೆ. ಅವನು ಈಗಾಗಲೇ ಸೆಳವು/ಅಪಸ್ಮಾರವನ್ನು ಅನುಭವಿಸಿದ್ದರೂ ಸಹ, ಅವನು ಹೀಗೆ ಯೋಚಿಸುತ್ತಾನೆ, ಹೇ! ಇದು ಮೊದಲ ಬಾರಿ ಸಂಭವಿಸಿದೆ. |
ಹೈಪರ್-ಕಾಯನೆಟಿಕ್ ಸೀಜರ್ | ರೋಗಿಯು ತುಂಬಾ ಉದ್ರೇಕಗೊಳ್ಳುತ್ತಾನೆ !!! ಮೀನಿನಂತೆ ಬಡಿಯಲು ಪ್ರಾರಂಭಿಸುತ್ತಾನೆ, ಅಥವಾ ಜೈಲು ಕೈದಿಯಂತೆ ಜೋರಾಗಿ ಕಿರುಚುತ್ತಾನೆ, ಅವನ ಕೈ ಮತ್ತು ಕಾಲುಗಳನ್ನು ತುಂಬಾ ಜೋರಾಗಿ ಬೀಸುತ್ತಾನೆ |
ಡೆಕರಿ-ಸಿಸ್ಟಿಕ್ ಸೀಜರ್ | ರೋಗಿಯು ಯಾವುದೇ ಕಾರಣವಿಲ್ಲದೆ ಅಳುತ್ತಾನೆ |
ಗ್ಯಾಸ್ಟ್ರಿಕ್ ಸೀಜರ್ | ರೋಗಿಯು ಯಾವುದೇ ಕಾರಣವಿಲ್ಲದೆ ನಗಲು ಪ್ರಾರಂಭಿಸುತ್ತಾನೆ |
ಉದಾಹರಣೆಗೆ ಈ ಹುಡುಗಿಯನ್ನೇ ತೆಗೆದುಕೊಳ್ಳಿ. ಆಡುತ್ತಿರುವಾಗ , ಅವಳು ದಿಗ್ಭ್ರಮೆಗೊಳ್ಳುತ್ತಾಳೆ ಮತ್ತು ಅವಳ ಬಲಗಣ್ಣು ಸೆಳೆತಕ್ಕೆ ಒಳಗಾಗುತ್ತದೆ. ಇದನ್ನು ಆಟೋಮ್ಯಾಟಿಸಮ್ ಎಂದು ಕರೆಯಲಾಗುತ್ತದೆ ಮತ್ತು ಇದು ಸೆಳೆತದ ಒಂದು ರೂಪವಾಗಿದೆ.
ಇಂತಹ ವಿಚಿತ್ರವಾದ ಸೆಳೆತದ ರೋಗಲಕ್ಷಣಗಳನ್ನು ನೋಡಿ ತಮಾಷೆ ಮಾಡಲು ಬಹಳ ವಿನೋದಮಯವಾಗಿವೆ ಅಲ್ಲವೇ! ದುಃಖಿತ ವ್ಯಕ್ತಿಗಳನ್ನು ನೋಡಿ ವ್ಯಂಗ್ಯವಾಗಿ ನಗುವುದು ಎಷ್ಟು ಸುಲಭ ಅಲ್ಲವೇ !
ಇದು ಸಭ್ಯತೆ ಅಲ್ಲ , ದಯವಿಟ್ಟು ಆ ರೀತಿ ಮಾಡಬೇಡಿ . ಸೆಳವು ಕಾಯಿಲೆಯ ಲಕ್ಷಣಗಳನ್ನು ಗುರುತಿಸಿ ಮತ್ತು ನಿಮಗೆ ಸಾಧ್ಯವಾದಷ್ಟು ಬೇಗ ಅವರಿಗೆ ಸರಿಯಾಗಿ ಚಿಕಿತ್ಸೆ ನೀಡಿ.
(Generalized Seizures Meaning in Kannada & Names) ದೊಡ್ಡ ಸೆಳವಿನ ಲಕ್ಷಣಗಳು ಮತ್ತು ಹೆಸರುಗಳು
ನಮಗೆ ತಿಳಿದಿರುವಂತೆ, ದೊಡ್ಡ ಸೆಳವು ಇಡೀ ಮೆದುಳಿನ ಮೇಲೆ ಹರಡುವ ಅನಿಯಂತ್ರಿತ ವಿದ್ಯುತ್ ತರಂಗಗಳಿಂದ ಉಂಟಾಗುತ್ತದೆ.
ನಿರೀಕ್ಷೆ ಮಾಡಿದಂತೆ, ದೊಡ್ಡ ಸೆಳವಿನ ರೋಗಲಕ್ಷಣಗಳು ಸಹ ತೀವ್ರವಾಗಿರುತ್ತದೆ.
ಮತ್ತೊಮ್ಮೆ ಹೇಳುತ್ತಿದ್ದೇನೆ , ಹೆಸರುಗಳಿಗೆ ಬದಲಾಗಿ ಸೆಳವಿನ ರೋಗಲಕ್ಷಣಗಳಿಗೆ ಗಮನ ಕೊಡಿ. generalized Seizure meaning in Hindi ಈ ರೋಗಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಅವಶ್ಯಕ ಎಂದು ತಿಳಿಯಬೇಕು.
ಈ ದೊಡ್ಡ ಸೆಳವಿನ ಇಂಗ್ಲಿಷ್ ಹೆಸರುಗಳು- ಅಬಸೆನ್ಸ್ ಸೆಳವು (Absence Seizures) ಮತ್ತು ಮಯೋಕ್ಲೋನಿಕ್ ಸೆಳವು (Myoclonic Seizures) ಇತ್ಯಾದಿಗಳಾಗಿವೆ. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಕೆಳಗಿನ ಅಡ್ಡ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ:
ದೊಡ್ಡ ಸೆಳವಿನ ಹೆಸರು | ದೊಡ್ಡ ಸೆಳವಿನ ಲಕ್ಷಣಗಳು (Generalized Seizure meaning in Kannada) |
---|---|
ಆಬ್ಸೆಂಟ್ (ಪೆಟಿಟ್-ಮಾಲ್) ಸೀಜರ್ | ರೋಗಿಯ ಅಥವಾ ಮಗು ಪ್ರತಿಕ್ರಿಯಿಸುವುದನ್ನು ನಿಲ್ಲಿಸುತ್ತಾನೆ. ಅವನು ತನ್ನದೇ ಆದ ಆಲೋಚನೆಗಳಲ್ಲಿ ಮುಳುಗಿರುವಂತೆ ತೋರುತ್ತದೆ ಮತ್ತು ಅವನ ಕಣ್ಣುಗಳು ತೆರೆದಿರುತ್ತವೆ. |
ಮಯೋಕ್ಲೋನಿಕ್ ಸೀಜರ್ | ಒಮ್ಮಿಂದೊಮ್ಮೆಲೇ ಸ್ವಲ್ಪ ಸೆಕೆಂಡುಗಳ ಕಾಲ ವಿದ್ಯುತ್ ಪ್ರವಹಿಸಿದಂತೆ ದೇಹವು ಥಟ್ಟನೆ ನಡುಗುತ್ತದೆ. |
ಸ್ಪಾಸ್ಮ್ | ಇಡೀ ದೇಹವು ಕೆಲವು ಸೆಕೆಂಡುಗಳ ಕಾಲ ಬಿಗಿಯಾಗುತ್ತದೆ. |
ಆಬ್ಸೆಂಟ್ (ಪೆಟಿಟ್-ಮಾಲ್) ಸೆಳವಿನ ಉದಾಹರಣೆಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ, ಇಲ್ಲಿ ಕೆಂಪು ಬಟ್ಟೆಯನ್ನು ಧರಿಸಿರುವ ಮಗು ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ.
ಆಬ್ಸೆಂಟ್ (ಪೆಟಿಟ್-ಮಾಲ್) ಸೆಳವಿನ ಉದಾಹರಣೆಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ, ಇಲ್ಲಿ ಕೆಂಪು ಬಟ್ಟೆಯನ್ನು ಧರಿಸಿರುವ ಮಗು ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ.ಮಕ್ಕಳಲ್ಲಿ ಈ ರೀತಿಯ ಸೆಳವು ಸಂಭವಿಸುತ್ತವೆ:
ಮಕ್ಕಳಲ್ಲಿ ಈ ರೀತಿಯ ಸೆಳವು ಸಂಭವಿಸುತ್ತವೆ. TSC alliance ಮಾಡಿದ ವೀಡಿಯೊವನ್ನು ವೀಕ್ಷಿಸಿ:
ಸಣ್ಣ ಮತ್ತು ದೊಡ್ಡ ಸೆಳವಿನಲ್ಲಿ ಕಂಡುಬರುವ ರೋಗಲಕ್ಷಣಗಳು:
ಎರಡೂ ವಿಧದ ಸೆಳವು ಕೈ ಮತ್ತು ಕಾಲುಗಳಲ್ಲಿ ಬಿಗಿತ ಅಥವಾ ಬಲವಾಗಿ ನಡುಗಿದಂತಹ ರೋಗಲಕ್ಷಣಗಳನ್ನು ಹೊಂದಿರಬಹುದು.
ಸಣ್ಣ ಸೆಳವು ಉಂಟಾದ ಸಮಯದಲ್ಲಿ ದೇಹದ ಒಂದು ಭಾಗವು ಮಾತ್ರ ಚಲಿಸುತ್ತದೆ, ಇದರಲ್ಲಿ ಮೆದುಳಿನಲ್ಲಿನ ಅನಿಯಂತ್ರಿತ ವಿದ್ಯುತ್ ತರಂಗಗಳು ದೇಹದ ಒಂದು ಭಾಗಕ್ಕೆ ಸೀಮಿತವಾಗಿರುತ್ತದೆ.
ಮೆದುಳಿನಲ್ಲಿ ದೊಡ್ಡ ಸೆಳವು ಸಂಭವಿಸಿದಾಗ ಈ ಅನಿಯಂತ್ರಿತ ವಿದ್ಯುತ್ ಮೆದುಳಿನಾದ್ಯಂತ ಹರಡುತ್ತದೆ ಮತ್ತು ಅದೇ ರೋಗಲಕ್ಷಣಗಳು ದೇಹದಾದ್ಯಂತ ಉಂಟಾಗುತ್ತದೆ.
ಅಂತಹ ಸೆಳವಿನ ಹೆಸರುಗಳು ಟಾನಿಕ್ ಸೆಳವು (tonic seizure) , ಕ್ಲೋನಿಕ್ ಸೆಳವು (clonic seizure) ಇತ್ಯಾದಿ. ಇವುಗಳ ಬಗ್ಗೆ ವಿವರವಾಗಿ ತಿಳಿಯಲು ಕೆಳಗಿನ ಅಡ್ಡ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ:
ಈಗ ನೀವು Seizure meaning in Kannada (ಕನ್ನಡದಲ್ಲಿ ಸೆಳವು ಅರ್ಥ) ವನ್ನು ಚೆನ್ನಾಗಿ ತಿಳಿದಿದ್ದೀರಿ!!
ಸೆಳವಿನ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಓದುವುದನ್ನು ಮುಂದುವರಿಸೋಣ.
ಸಂಕ್ಷಿಪ್ತವಾಗಿ
- Seizure meaning in Kannada (ಕನ್ನಡದಲ್ಲಿ ಸೀಜರ್ ಅರ್ಥ) ಎಂದರೆ ಸೆಳವಿನ ಕಾಯಿಲೆ.
- ನಮ್ಮ ಮೆದುಳಿನ ಭಾಗಗಳು ನಿಯಂತ್ರಿತ ವಿದ್ಯುತ್ ತರಂಗಗಳ ಮೂಲಕ ಪರಸ್ಪರ ಸಂವಹನ ನಡೆಸುತ್ತವೆ.
- ಅನಿಯಂತ್ರಿತ ವಿದ್ಯುತ್ ತರಂಗಗಳು ಸೆಳವನ್ನು ಉಂಟುಮಾಡುತ್ತದೆ.
- ಈ ಅನಿಯಂತ್ರಿತ ವಿದ್ಯುತ್ ಮೆದುಳಿನ ಒಂದು ಸಣ್ಣ ಭಾಗದಲ್ಲಿ ಹರಡಿದಾಗ , ಇದನ್ನು ಸಣ್ಣ-ಸೆಳವು (ಫೋಕಲ್ ಸೀಜರ್- Focal Seizure ) ಎಂದು ಕರೆಯಲಾಗುತ್ತದೆ.
- ಅನಿಯಂತ್ರಿತ ವಿದ್ಯುತ್ ಮಿದುಳಿನಾದ್ಯಂತ ಹರಡಿದಾಗ, ಇದನ್ನು ದೊಡ್ಡ ಸೆಳವು (ಜನರಲ್ ಸೀಜರ್- Generalized Seizure) ಎಂದು ಕರೆಯಲಾಗುತ್ತದೆ.
- ಸಣ್ಣ ಮತ್ತು ದೊಡ್ಡ ಸೆಳವಿನ ರೋಗಲಕ್ಷಣಗಳನ್ನು ಮೇಲೆ ಸಂಪೂರ್ಣವಾಗಿ ವಿವರಿಸಲಾಗಿದೆ.
ನೀವು ನಂತರ, Epilepsy meaning in Kannada (ಅಪಸ್ಮಾರದ ಅರ್ಥ) ಲೇಖನವನ್ನು ಓದುವಿರಿ:
- MRI ಬಳಸಿ ಮೆದುಳಿನ ಚಿತ್ರಗಳನ್ನು ಸೆರೆಹಿಡಿಯಲಾಗುತ್ತದೆ. “3 ಟೆಸ್ಲಾ” MRI ಅತ್ಯುತ್ತಮವಾಗಿದೆ.
- E-E-G ಮೆದುಳಿನ ವಿದ್ಯುಚ್ಛಕ್ತಿಯನ್ನು ಅಳೆಯುತ್ತದೆ.
ಸೆಳವು ರೋಗದ ಚಿಕಿತ್ಸೆಗಾಗಿ ಅನೇಕ ಔಷಧಿಗಳು ಲಭ್ಯವಿದೆ.- 2 ರಿಂದ 3 ಔಷಧಿಗಳು ಫಲಕಾರಿಯಾಗದಿದ್ದರೆ, ಸೆಳವು ಶಸ್ತ್ರಚಿಕಿತ್ಸೆ ಅಥವಾ ವಾಗಸ್-ನರ್ವ್-ಸ್ಟಿಮ್ಯುಲೇಟರ್ (Vagus Nerve Stimulator) ಅನ್ನು ಪರಿಗಣಿಸಬೇಕು.
5.ಸೆಳವಿನ ಶಸ್ತ್ರ ಚಿಕಿತ್ಸೆಯಾಗಲಿ, VNS ಆಗಲಿ 100% ಪರಿಣಾಮಕಾರಿ ಎಂದು ಜಗತ್ತಿನ ಯಾರಿಂದಲೂ ಖಾತರಿಪಡಿಸಲಾಗುವುದಿಲ್ಲ. ಆದಾಗ್ಯೂ, ಈ ಚಿಕಿತ್ಸೆಯನ್ನು ಎಚ್ಚರಿಕೆಯಿಂದ ಮತ್ತು ಗಮನದಿಂದ ನಡೆಸಿದಾಗ ಅನೇಕ ರೋಗಿಗಳು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ.
Translated into Kannada by Mr. Akshay Bhat (click for profile).
ಡಾ. ಸಿದ್ಧಾರ್ಥ್ ಖಾರ್ಕರ್ (Dr. Siddharth Kharkar) |
![]() ಡಾ. ಸಿದ್ಧಾರ್ಥ್ ಖಾರ್ಕರ್ ಅವರನ್ನು ಮುಂಬೈನ ಪ್ರಸಿದ್ಧ ನರವಿಜ್ಞಾನಿಗಳಲ್ಲಿ ಒಬ್ಬರು ಎಂದು “ಔಟ್‌ಲುಕ್ ಇಂಡಿಯಾ” ಮತ್ತು “ಇಂಡಿಯಾ ಟುಡೆ” ನಂತಹ ನಿಯತಕಾಲಿಕೆಗಳು ಗುರುತಿಸಿವೆ. ಇವರು ಬೋರ್ಡ್ ಪ್ರಮಾಣೀಕೃತ (ಅಮೇರಿಕನ್ ಬೋರ್ಡ್ ಆಫ್ ಸೈಕಿಯಾಟ್ರಿ ಮತ್ತು ನ್ಯೂರಾಲಜಿ ಪ್ರಮಾಣೀಕೃತ) ನರವಿಜ್ಞಾನಿ. ಡಾ. ಸಿದ್ಧಾರ್ಥ್ ಖಾರ್ಕರ್ ಮುಂಬೈನ (Best Epilepsy specialist in Mumbai, India) ಅಪಸ್ಮಾರ ತಜ್ಞ ಮತ್ತು ಮುಂಬೈ, ಮಹಾರಾಷ್ಟ್ರ, ಭಾರತದ ಪಾರ್ಕಿನ್‌ಸನ್ (Parkinson’s Disease Specialist) ನ ತಜ್ಞ. ಇವರು ಮುಂಬೈನ KEM ಆಸ್ಪತ್ರೆ, ಬಾಲ್ಟಿಮೋರ್‌ನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ, ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (UCSF), USA ಮತ್ತು ಲಂಡನ್‌ನ ಕಿಂಗ್ಸ್ ಕಾಲೇಜು ಸೇರಿದಂತೆ ಭಾರತ, US ಮತ್ತು UK ಯ ಅತ್ಯುತ್ತಮ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದಾರೆ. |
Caution: This information is not a substitute for professional care. Do not change your medications/treatment without your doctor's permission. |
![]() Dr. Siddharth KharkarDr. Siddharth Kharkar has been recognized as one of the best neurologists in Mumbai by Outlook India magazine and India today Magazine. He is a board certified (American Board of Psychiatry & Neurology certified) Neurologist. Dr. Siddharth Kharkar is a Epilepsy specialist in Mumbai & Parkinson's specialist in Mumbai, Maharashtra, India. He has trained in the best institutions in India, US and UK including KEM hospital in Mumbai, Johns Hopkins University in Baltimore, University of California at San Francisco (UCSF), USA & Kings College in London. |